ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ: ಗ್ರಾಮಸ್ಥರ ಅಸಮಾಧಾನ

Last Updated 30 ಜನವರಿ 2014, 6:01 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ರಾಜ್ಯದಲ್ಲಿ ಅತಿ ಹೆಚ್ಚು ಕೆರೆ ಹೊಂದಿರುವ ಖ್ಯಾತಿಗೆ ಪಾತ್ರವಾದ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಈಗ  ಕೆರೆಗಳು ಕ್ರಮೇಣ ಬಲಾಢ್ಯರ ಬತ್ತುವರಿಗೆ ಅಹುತಿಯಾಗುತ್ತಿದೆ. !

   ಒಂದೇ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಹತ್ತು ಕೆರೆಗಳಿದ್ದು, ಆಗ ಊರು ಸಮೃದ್ಧವಾಗಿತ್ತು. ಆದರೆ, ಈಗ 2 ಮೈಲು ದೂರದಿಂದ ಕುಡಿಯಲು ನೀರು ತರುವ ದುಸ್ಥಿತಿ ನಿರ್ಮಾಣವಾಗಿದೆ.

  ಜನರ ಸ್ವಹಿತಾಸಕ್ತಿಯ ಆವಶ್ಯಕತೆ  ಪೂರೈಸಲು ಹತ್ತಾರು ಕೆರೆಗಳು ನಾಶವಾದವು. ಸದ್ಯಕ್ಕೆ ಉಳಿದಿರು ವುದು ಎರಡು ಕೆರೆಗಳು ಮಾತ್ರ! ಅದರಲೂ ಒಂದು ಅಳಿವಿನಂಚಿನಲ್ಲಿದೆ.

ಉಳ್ಳವರ ಸ್ವತ್ತಾದವು: ಸುಮಾರು ವರ್ಷಗಳ ಹಿಂದೆ  ಈ ಭಾಗದಲ್ಲಿ ಭದ್ರಾ ಜಲಾಶಯ ನಿರ್ಮಾಣ ವಾಗಿ ಆ ಪ್ರದೇಶ ನೀರಾವರಿಯಾಗಿ ಮಾರ್ಪಟ್ಟಿತ್ತು. ಪರಿಣಾಮ ಜಮೀನು ಒತ್ತುವರಿ ಕಾರ್ಯ ಎಗ್ಗಿಲ್ಲದೇ ನಡೆದಿದೆ. ಈ ಸಂದರ್ಭದಲ್ಲಿ ವಿಶಿಷ್ಟ ಇತಿಹಾಸ ಹೊಂದಿದ್ದ ಒಂದೊಂದೇ ಕೆರೆಗಳು ಉಳ್ಳವರ ಪಾಲಾದವು.

ಹೀಗೆ ನಾಶವಾದ ಕೆರೆಗಳಲ್ಲಿ ಕಾಕಮಲ್ಲಿಕೆರೆ, ರಾಮದೇವರಕೆರೆ, ಗಿರಿಯಪ್ಪನಕೆರೆ, ಅಯ್ಯನಕೆರೆ, ಕೋಡಿಕೆರೆ, ದೇವುಕಟ್ಟೆಕೆರೆ, ಮೇಲ್‌ಕಟ್ಟೆಕೆರೆ, ವಡ್ಡರಹಟ್ಟಿಕೆರೆ, ಮುಂತಾದವು.

  ಬಳಸೊಕೆರೆ ಸರ್ಕಾರದ ಅನುದಾನದಲ್ಲಿ ಹೂಳೆತ್ತಿ ತಕ್ಕ ಮಟ್ಟಿಗೆ ಅಭಿವೃದ್ಧಿಪಡಿಸಲಾಗಿದೆ. ಒತ್ತುವರಿಮುಂದುವರಿದರೆ ಆದೂ ಉಳಿದ ಕೆರೆಗಳ ಪಟ್ಟಿಗೆ ಸೇರುವುದು ಖಚಿತ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.

ಮತೊಂದು ಊರಿನ ಹೊರ ಭಾಗದಲ್ಲಿರುವ ಅತಿದೊಡ್ಡ ಪ್ರಮಾಣದ ಬೆಳೆಕಟ್ಟೆಕೆರೆ ಒತ್ತುವರಿಯಾಗಿ ಸ್ವಲ್ಪ ಒಳಿದಿದೆ. ಪೂರೈಕೆಯಾಗುತ್ತಿರುವ ಭದ್ರಾ ನಾಲೆಯ ನೀರು ಆಕಸ್ಮಾತ್‌ ನಿಂತರೆ ಊರಿಗೆ ಬರ ತಪ್ಪಿದ್ದಲ್ಲ. ಸುಮಾರು 4ಕಿ.ಮೀ ಊರಿನ ಸುತ್ತ ಕಂಗೊಳಿಸುತ್ತಿದ್ದ ಐತಿಹಾಸಿಕ ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ. ಗ್ರಾಮದ ಮುಖಂಡರು ಮುತುವರ್ಜಿ ವಹಿಸಿ ಒತ್ತುವರಿಯಾದ ಕೆರೆಗಳ ರಕ್ಷಣೆ ಮಾಡಬೇಕು ಎನ್ನುವುದು ಗ್ರಾಮದ ಹಿರಿಯರ ಮನದಾಳದ ಮಾತು.

  ಸರ್ಕಾರದ ಧೋರಣೆ: ಈಚೆಗೆ ಅರಹಾತೊಳ್ಳಲು ಗ್ರಾಮದಲ್ಲಿ ಕೆರೆಗಳ ಆಕ್ರಮ ಒತ್ತುವರಿ ತೆರವು ಕಾರ್ಯಕ್ರಮದ ಅಡಿಯಲ್ಲಿ 14.23ಎಕರೆ ಅಡಿಕೆ ತೋಟ ಭದ್ರಾವತಿ ತಹಶೀಲ್ದಾರ್‌ ನೇತೃತ್ವದಲ್ಲಿ ಸರ್ವೆ ಮಾಡಿಸಿ ಜಾಗ ತೆರವುಗೊಳಿಸಲಾಗಿತ್ತು.ಅಭಿವೃದ್ಧಿ ನೆಪದಲ್ಲಿ ಕೋಟ್ಯಂತರ ರೂಪಾಯಿ ವ್ಯಯಮಾಡುತ್ತಿರುವ ಸರ್ಕಾರ ಇದುವರೆಗೂ ಗ್ರಾಮದ ಕಡೆಗೆ ಗಮನ  ಹರಿಸಿಲ್ಲ ಎನ್ನುವುದು ಸ್ಥಳೀಯರ ಆಸಮಾಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT