ಶಿವಮೊಗ್ಗ: ಸಮ್ಮೇಳನಾಧ್ಯಕ್ಷರು ಭಾನುವಾರ ಅಭಿಮಾನ ಶೂನ್ಯ ಕನ್ನಡಿಗರಿಗೆ ಮಾತಿನ ಚಾಟಿಯೇಟು ನೀಡಿದರೆ, ಸೋಮವಾರ ಸಮಾರೋಪ ಸಮಾರಂಭದಲ್ಲಿ ಮಡಿಕೇರಿಯ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ನಾ.ಡಿಸೋಜ ಸಾಹಿತಿಗಳನ್ನು, ಸಾಹಿತಿಗಳ ಆತಂಕಕ್ಕೆ ಕಾರಣವಾದ ಪ್ರಭುತ್ವಕ್ಕೆ ಚಾಟಿ ಬೀಸಿದರು.

ಎರಡು ದಿನಗಳಿಂದ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾ.ಡಿಸೋಜ ಅವರ ಶುಭ ವಿದಾಯದ ನುಡಿಯೊಂದಿಗೆ ಸಮಾಪ್ತಿಗೊಂಡಿತು.

ಮೃದು ಹೃದಯದ ಬಂಡಾಯಗಾರ ಡಿಸೋಜ, ‘ತನ್ನ ಮೂಗಿನ ನೇರಕ್ಕೆ ಮಾತನಾಡಿದ್ದನ್ನು ಸಾಹಿತಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಸಾಹಿತಿಯನ್ನು ರಸ್ತೆಗೆ ಎಳೆಯುವ ಕೆಲಸ ಈಗ ನಡೆಯುತ್ತಿದೆ. ಸಮಾಜ ಎಲ್ಲರಿಗೂ ಅಭಿಪ್ರಾಯ ಸ್ವಾತಂತ್ರ್ಯ ಕೊಟ್ಟಿದೆ. ಸಾಹಿತಿಗೂ ಜವಾಬ್ದಾರಿ ಇದೆ. ಆ ಹೊಣೆಗಾರಿಕೆಯನ್ನು ಅವರು ನಿರ್ವಹಿಸಿದರೆ ಅವರನ್ನು ಹೀಗಳಿಯುವ, ಅವರ ವಿರುದ್ಧ ತಿರುಗಿಬೀಳುವ ಪ್ರವೃತ್ತಿ ಬೆಳೆಯುತ್ತಿದೆ’ ಎಂದು ವಿಷಾದಿಸಿದರು.

ಇದೇ ಪ್ರವೃತ್ತಿ ಬೆಳೆದರೆ ಮುಂದೆ ಸಾಹಿತಿಯಾದವನು ಒಂದೇ ಒಂದು ಶಬ್ದ ಬರೆಯಲು ಕಷ್ಟವಾಗಬಹುದು. ಲೇಖಕನಿಗೆ ಈ ರೀತಿಯ ಪರಿಸ್ಥಿತಿ ಬರಬಾರದು. ಸಾಹಿತಿಯ ಮಾತಿನ ಮರ್ಮ ಏನು? ಆತ ಏತಕ್ಕಾಗಿ ಹೀಗೆ ಹೇಳುತ್ತಿದ್ದಾನೆ ಎಂಬುದನ್ನು ಗಮನಿಸಬೇಕು. ಲೇಖಕನಿಗೆ ಸಮಾಜ ಬೆಂಬಲ ನೀಡಬೇಕು. ಇಲ್ಲದಿದ್ದರೆ ಸಾಹಿತ್ಯಕ್ಕೆ ಅಪಾಯ ಬರುತ್ತದೆ ಎಂದು ಮನವಿ ಮಾಡಿದರು.

ಸಾಹಿತಿಯಾದವನೂ ಇಂದು ತನ್ನ ಜವಾಬ್ದಾರಿ ಮರೆತಿದ್ದಾನೆ ಎಂದು ಸಾಹಿತಿಯನ್ನೂ ವಿರ್ಮಶೆಗೆ ಒಳಪಡಿಸಿದ ಡಿಸೋಜ ಅವರು, ಇತ್ತೀಚಿನ ದಿನಗಳಲ್ಲಿ ಲೇಖಕರು ಪ್ರಭುತ್ವದೊಂದಿಗೆ ರಾಜಿ ಮಾಡಿಕೊಂಡು ಹೇಳಬೇಕಾದ್ದನ್ನು ಹೇಳುತ್ತಿಲ್ಲ. ಆಳುವವರ ಜತೆ ವಸೂಲಿಬಾಜಿಯಲ್ಲಿ ತೊಡಗಿದ್ದಾರೆ. ಸತ್ಯವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ನುಡಿದರು.

ಲೇಖಕರಲ್ಲೂ ಎರಡು ಸ್ವಭಾವ ಇರುತ್ತದೆ. ಸಮಾಜದಲ್ಲಿ ತಪ್ಪುಗಳನ್ನು ಇನಿ–ದನಿಯಲ್ಲಿ ಕೇಳುವ ಕೆಲಸವನ್ನು ಒಮ್ಮೆ ಮಾಡಿದರೆ; ಮತ್ತೊಮ್ಮೆ ಲೇಖಕ ಕೆರಳಿ ನಿಲ್ಲುತ್ತಾನೆ. ಪಂಪ, ಬಸವಣ್ಣ ಇದಕ್ಕೆ ಉತ್ತಮ ಉದಾಹರಣೆ ಎಂದು ಡಿಸೋಜ ಅವರಿಬ್ಬರನ್ನೂ ಉಲ್ಲೇಖಿಸಿದರು.

ಪಂಪ ಕುಳಿತರೆ ಕವಿ, ನಿಂತರೆ ಯೋಧ. ಅರಿಕೇಸರಿ ಆಸ್ಥಾನದಲ್ಲಿ ಯೋಧನಾಗಿ, ಸಂದರ್ಭ ಬಂದಾಗ ಯುದ್ಧ ಮಾಡುತ್ತಿದ್ದ. ಬಸವಣ್ಣ ವಚನ ಬರೆಯುವುದರ ಜತೆಗೆ ಯುದ್ಧದ ಸಂದರ್ಭದಲ್ಲಿ ದಂಡನಾಯಕನಾಗಿಯೂ ವೈರಿಗಳನ್ನು ಎದುರಿಸುತ್ತಿದ್ದ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರು ಸಮಾರೋಪ ಸಮಾರಂಭದಲ್ಲೂ ತಮ್ಮ ಮೊದಲ ದಿನದ ಅಧ್ಯಕ್ಷತೆಯ ಭಾಷಣವನ್ನೇ ಪುನರ್ ಉಚ್ಚರಿಸಿದರು. ಕನ್ನಡ ಮಾಧ್ಯಮವನ್ನು ಕಡ್ಡಾಯವಾಗಿ ಮಾಡಲು ಸಾಧ್ಯವಾಗದಿರಬಹುದು. ಆದರೆ, ಕನ್ನಡವನ್ನು ಒಂದು ವಿಷಯವನ್ನಾಗಿ ಕಡ್ಡಾಯಗೊಳಿಸಲು ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದರು

ಕನ್ನಡ ಭಾಷೆ ಬೆಳೆಸುವಲ್ಲಿ ಪೋಷಕರ ಮಾತ್ರ ಬಹಳ ದೊಡ್ಡದು ಎಂದ ಅವರು, ಕನ್ನಡವನ್ನು ಉತ್ತಮವಾಗಿ ಮಾತನಾಡುವ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಶರಾವತಿ ನಗರದ ಬಾಲಯೇಸು ದೇವಾಯಲಯದ ಫಾ. ಪ್ಯಾಟ್ರಿಕ್ ಮಾರ್ಕ್ ಡಿಸಿಲ್ವಾ ಮಾತನಾಡಿ, ಕನ್ನಡ ಬಳಸುವ ಬಗ್ಗೆ ಅಭಿಮಾನ ಇರಬೇಕು. ದೃಢಸಂಕಲ್ಪ ತೊಡಬೇಕು ಎಂದರು.

ನ್ಯಾಯಾಂಗದಲ್ಲಿ ಕನ್ನಡ ಬಳಕೆ‘ ನ್ಯಾಯಾಂಗ ದಲ್ಲಿ ಕನ್ನಡ ಭಾಷೆ ಬಳಸುವ ಪ್ರಯತ್ನ ಆಗಬೇಕಿದೆ ಎಂದು ವಿಧಾನ ಪರಿಷತ್ತು ಸದಸ್ಯ ಆರ್.ಕೆ.ಸಿದ್ದರಾಮಣ್ಣ ಅಭಿಪ್ರಾಯಪಟ್ಟರು. ಶಾಸಕಾಂಗದಲ್ಲಿ ಕನ್ನಡ ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗದಲ್ಲಿ ಅದನ್ನು ಬಳಸಬೇಕು. ನ್ಯಾಯಾಲಯದ ತೀರ್ಪುಗಳು ಕನ್ನಡ ಭಾಷೆಯಲ್ಲಿಯೇ ಬರಬೇಕು ಎಂದರು.

ಬಿಎಸ್ವೈ ಗೈರುಹಾಜರಿ: ಸಂಸತ್ ಸದಸ್ಯ ಬಿ.ಎಸ್ ಯಡಿಯೂರಪ್ಪ ಗೈರುಹಾಜರಿ ಸಮ್ಮೇಳನ ದಲ್ಲಿ ಎದ್ದು ಕಾಣುತ್ತಿತ್ತು. ಸಮ್ಮೇಳನ ಅಧ್ಯಕ್ಷರನ್ನು ಅವರೇ ಅಭಿನಂದಿಸಬೇಕಾಗಿತ್ತು, ಆದರೆ, ಸ್ವತಃ ಚುನಾವಣೆ ಗೆದ್ದ ಖುಷಿಯಲ್ಲಿ ಜಿಲ್ಲಾದಾದ್ಯಂತ ಸನ್ಮಾನದ ಸುಖದಲ್ಲಿ ತೇಲಿಹೋಗಿದ್ದರಿಂದ ಸಮ್ಮೇಳನಕ್ಕೆ ಬರುವುದಕ್ಕೆ ಅವರಿಗೆ ಬಿಡುವು ಸಿಕ್ಕಿಲ್ಲ ಎಂಬ ಮಾತು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಾಹಿತ್ಯಾಸಕ್ತರಿಂದ ಕೇಳಿ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.