ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ್‌ಗೆ ಮಾತೃ ವಿಯೋಗ

Last Updated 20 ಮಾರ್ಚ್ 2020, 4:58 IST
ಅಕ್ಷರ ಗಾತ್ರ

ಸಿಂದಗಿ (ವಿಜಯಪುರ): ಮಾಜಿ ಶಾಸಕ ರಮೇಶ ಭೂಸನೂರ ಅವರ ತಾಯಿ ಬಸಲಿಂಗಮ್ಮ ಬಾಳಪ್ಪ ಭೂಸನೂರ (81) ಶುಕ್ರವಾರ ವಿಜಯಪುರದಲ್ಲಿ ನಿಧನರಾದರು.

ಇವರಿಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಮಗಳ ವಿವಾಹ ಮುಂದೂಡುವ ಸಂದರ್ಭದಲ್ಲಿ ತಾಯಿ ತನ್ನ ಮೊಮ್ಮಗಳ ವಿವಾಹ ನೋಡುವುದು ತಮ್ಮ ಕೊನೆಯ ಆಸೆ ಎಂದು ಕೇಳಿಕೊಂಡಿದ್ದರು. ಹೀಗಾಗಿ ರಮೇಶ ಅವರು ಮಾ.19 ರಂದು ವಿಜಯಪುರದಲ್ಲಿ ತಮ್ಮ ಪುತ್ರಿಯ ವಿವಾಹವನ್ನು ಸರಳವಾಗಿ ನೆರವೇರಿಸಿದ್ದರು.

ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಸ್ವಗ್ರಾಮ ದೇವಣಗಾಂವದಲ್ಲಿ ನೆರವೇರಿಸಲಾಗುವುದು ಎಂದು ರಮೇಶ ಭೂಸನೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT