3

ಸರ್ಕಾರಿ ಶಾಲೆಗೆ ನುಗ್ಗಿದ ನಾಗರಹಾವು

Published:
Updated:
ಕವಣಾಪುರ ಸರ್ಕಾರಿ ಶಾಲೆಯಲ್ಲಿ ಹಿಡಿದ ಹಾವನ್ನು ತೋರಿಸಿದ ಅಯೂಬ್‍ ಖಾನ್‌

ರಾಮನಗರ: ಇಲ್ಲಿನ ಕವಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವಾಗಲೇ ತರಗತಿ ಕೊಠಡಿಯ ಒಳಗೆ ಹಾವು ನುಗ್ಗಿ ಮಕ್ಕಳು, ಶಿಕ್ಷಕರು ಭಯಭೀತರಾದ ಘಟನೆ ಸೋಮವಾರ ನಡೆಯಿತು.

ತರಗತಿ ಪ್ರಾರಂಭವಾಗಿ ಮಕ್ಕಳು ಪಾಠ ಕೇಳುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿರುವಾಗ ಹೊರಗಡೆಯಿಂದ ಸುಮಾರು ಏಳೂವರೆ ಅಡಿಗೂ ಗೋಧಿ ಬಣ್ಣದ ನಾಗರಹಾವು ತರಗತಿ ಕೊಠಡಿಗೆ ನುಗ್ಗಿತು. ಇದನ್ನು ನೋಡಿದ ಮಕ್ಕಳು ಹೌಹಾರಿ ಗಾಬರಿಯಿಂದ ಕಿರುಚಾಡತೊಡಗಿದರು. ಶಿಕ್ಷಕರು ಕೂಡಲೇ ಮಕ್ಕಳನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ ಅವರು ಗಾಬರಿಗೊಳ್ಳದಂತೆ ಪ್ರಯತ್ನ ನಡೆಸಿದರು.

ಮಕ್ಕಳ ಕಿರುಚಾಟದಿಂದ ಗಾಬರಿಗೊಂಡ ಹಾವು ಮೂಲೆಯಲ್ಲಿದ್ದ ಮರದ ಕಪಾಟಿನಲ್ಲಿ ಸೇರಿಕೊಂಡಿತು. ಶಾಲಾ ಕೊಠಡಿಯ ಒಳಗೆ ಹಾವು ಬಂದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಹಾವು ಹಿಡಿಯುವ ಅಯುಬ್ ಖಾನ್ ಎಂಬುವರನ್ನು ಕರೆಯಿಸಿ ಹಾವು ಹಿಡಿಸಿದರು.

ಇದರಿಂದ ಗಾಬರಿಗೊಂಡಿದ್ದ ಮಕ್ಕಳು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !