ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜಾ ಮಹೋತ್ಸವ

7

ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜಾ ಮಹೋತ್ಸವ

Published:
Updated:
Deccan Herald

ರಾಮನಗರ: ಇಲ್ಲಿನ ವಿಜಯನಗರ ಬಡಾವಣೆಯ ಕಾಳಿಕಾಂಬ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶ್ವಕರ್ಮ ಸಮಾಜದ ವತಿಯಿಂದ ವಿಶೇಷ ಪೂಜಾ ಮಹೋತ್ಸವವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೆ ಕಾಳಿಕಾಂಬ ದೇವಿಗೆ ಅಭಿಷೇಕ, ನವಗ್ರಹ ಆರಾಧನೆ, 48 ಕಳಸ ಸ್ಥಾಪನೆ ವಿವಿಧ ಹೋಮಗಳ ಜತೆಗೆ ಚಂಡಿ, ಮೃತ್ಯುಂಜಯ ಹೋಮ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ಬೆಳಗ್ಗಿನಿಂದ ದೇವಾಲಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಕಾಳಿಕಾಂಬ ದೇವಿಗೆ ವಿಶೇಷ ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಶ್ರದ್ಧಾ ಭಕ್ತಿಯಿಂದ ದೇವಿಗೆ ಮಡಿಲು ತುಂಬಿಸಿ, ಹರಕೆ ಪೂಜೆಗಳನ್ನು ಸಮರ್ಪಿಸಿ ಭಕ್ತಿಭಾವ ಮೆರೆದರು.

ಜನತೆಯ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ ಬಯಸಿ 14 ವರ್ಷಗಳಿಂದ ಭೀಮನ ಅಮಾವಾಸ್ಯೆಯ ದಿನ ನಿರಂತರವಾಗಿ ದೇವಿಯ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ. ಉಮೇಶ್‌ ತಿಳಿಸಿದರು.

ಮೆರವಣಿಗೆ: ಮಂಗಳವಾದ್ಯ ಹಾಗೂ ವೀರಗಾಸೆ ಕುಣಿತದೊಂದಿಗೆ ಸಂಜೆ ವೇಳೆಗೆ ಅಲಂಕೃತ ಕಾಳಿಕಾಂಬ ಮತ್ತು ವಿಶ್ವಕರ್ಮ ದೇವರ ಮೂರ್ತಿಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಹಾಸಿನಿಯರಿಂದ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ಕೀರ್ತನೆಗಳ ಹಾಡುಗಾರಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಧಾನ ಅರ್ಚಕ ಶ್ರೀಧರಚಾರ್ಯ, ಅರ್ಚಕ ರೇಣುಕಾಚಾರ್ಯ, ಮುಖಂಡರಾದ ದೊರೆಸ್ವಾಮಿ, ರಾಜಶೇಖರ್, ರೈಡ್ ನಾಗರಾಜು, ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಲಿಂಗಾಚಾರ್, ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷರಾದ ಜಿ.ರಾಜಾಪ್ಪಾಜಿ, ಪಿ.ಲಿಂಗಾಚಾರ್, ಎಸ್,ದೇವರಾಜು, ಖಜಾಂಚಿ ಎನ್.ರಮೇಶ್, ಪದಾಧಿಕಾರಿಗಳಾದ ಆರ್.ಬಿ.ಲೋಕೇಶ್, ಎಚ್.ಎಸ್.ಕೃಷ್ಣಮೂರ್ತಿ, ಕೆ.ಚಂದ್ರಮೋಹನ್, ನಾಗೇಶ್, ಆರ್.ಬಸವರಾಜಚಾರ್, ನಾಗರಾಜಾಚಾರ್, ಎಚ್.ಎಸ್.ರಾಜಶೇಖರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !