ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕವಾಗಿ ಸದೃಢರಾಗಲು ಸಲಹೆ

Last Updated 1 ಆಗಸ್ಟ್ 2019, 11:48 IST
ಅಕ್ಷರ ಗಾತ್ರ

ತಿಕೋಟಾ: ‘ಎಲ್ಲ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ. ಮಕ್ಕಳು ಆಟೋಟಗಳಲ್ಲಿ ಪಾಳ್ಗೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗಬೇಕು ಎಂದು ಘೋಣಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದರಾಯ ಸಿದ್ದನಾಥ ಹೇಳಿದರು.

ತಾಲ್ಲೂಕಿನ ಕಳ್ಳಕವಟಗಿಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

‘ಕೆಲವು ಮಕ್ಕಳು ವಿವಿಧ ಆಟಗಳನ್ನು ಆಡಲು ದೈಹಿಕವಾಗಿ ಸಮರ್ಥರಿದ್ದರೂ ಅವರಿಗೆ ಅವಕಾಶಗಳು ದೊರೆತಿರುವುದಿಲ್ಲ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಅವಕಾಶ ಮಾಡಿಕೊಡಬೇಕು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಲಾಗುವುದು’ ಎಂದು ಘೋಷಿಸಿದರು.

ಸಿಆರ್‌ಪಿ ಎ.ಜೆ.ಬೋಸಲೆ ಮಾತನಾಡಿ, ‘ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ವಿದ್ಯಾರ್ಥಿಗಳು ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದರು.

ಎಂ.ಐ.ಕನಬೂರ, ಶೇಖಸಾಬ ಮುಲ್ಲಾ, ಮಲ್ಲಪ್ಪ ರಾಸ್ಕರ, ಸದಾಶಿವ ಗಿಡ್ಡನವರ, ಎಚ್.ಎಸ್.ಹೊನಮೋರೆ, ಎಸ್.ವಿ.ಸಿಂಗೆ, ಎಸ್.ಬಿ.ಕಾಂಬಳೆ, ಎಚ್.ಆರ್.ಕಲಾಲ, ಎಚ್.ಎಸ್.ಬಂಡಿವಡ್ಡರ, ವಿ.ಎಸ್.ಬಿರಾದಾರ, ಎಸ್.ವೈ.ಲಂಬು, ಸವಿತಾ ಹತ್ತಿಕಾಳ, ಸದಾಶಿವ ಮುಂಜೆ, ಎಚ್.ಆರ್.ಕಲಾಲ, ದುಂಡಪ್ಪ ಲಂಗೂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT