ತಹಶೀಲ್ದಾರ್‌ಗೆ ನಿಂದನೆ: ಖಂಡನೆ

7

ತಹಶೀಲ್ದಾರ್‌ಗೆ ನಿಂದನೆ: ಖಂಡನೆ

Published:
Updated:
Deccan Herald

ಮಾಗಡಿ: ‘ತಹಶೀಲ್ದಾರ್‌ ರಮೇಶ್ ಅವರ ವಿರುದ್ಧ ನಿಂದನೆ ಹೇಳಿಕೆ ನೀಡಿರುವ ತಾಲ್ಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌ ವಿರುದ್ಧ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಎಂ.ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಮೇಶ್‌ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಸಹ ಕಳೆದಿಲ್ಲ. 20ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ರಸ್ತೆ ವಿಚಾರದಲ್ಲಿ ಮೌನವಾಗಿದ್ದ ಧನಂಜಯ ನಾಯ್ಕ, ಈಚೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ತಹಶೀಲ್ದಾರ್‌ ಅವರನ್ನು ಕಾನೂನು ಬಾಹಿರವಾಗಿ ದಾಖಲೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಒಪ್ಪದ ಅವರನ್ನು ನಿಂದಿಸಿದ್ದಾರೆ. ಹೇಳಿಕೆಗೆ ಸಾಕ್ಷಿ ತೋರಿಸಲಿ. ಕಾನೂನು ರೀತಿ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಬೆದರಿಸುವುದು ಸರಿಯಲ್ಲ ಎಂದಿದ್ದಾರೆ.

ಪಕ್ಷದ ಮುಖಂಡರಾದ ಕಲ್ಕೆರೆ ಉಮೇಶ್‌, ಅರುಂಧತಿ ಚಿಕ್ಕಣ್ಣ, ಮುನಿರಾಜು, ರಂಗನರಸಿಂಹಯ್ಯ, ರಾಮಕೃಷ್ಣಯ್ಯ, ಕೆಇಬಿ ಸಿದ್ದಪ್ಪ, ಗಂಗರಾಮಯ್ಯ, ರೂಪೇಶ್‌ ಕುಮಾರ್‌, ಸುರೇಶ್‌, ಶಿವರಾಮಯ್ಯ, ಸುದರ್ಶನ್‌, ನಟರಾಜ, ಧರ್ಮಪಾಲ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !