ಹೊಸನಗರ ತಾಲ್ಲೂಕಿಗೂ ಬಂತು ಟ್ಯಾಂಕರ್ ನೀರು

ಮಂಗಳವಾರ, ಜೂನ್ 18, 2019
28 °C
ಹೊಸನಗರ: 22 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಾರಕಕ್ಕೆ

ಹೊಸನಗರ ತಾಲ್ಲೂಕಿಗೂ ಬಂತು ಟ್ಯಾಂಕರ್ ನೀರು

Published:
Updated:
Prajavani

ಹೊಸನಗರ: ವಿವಿಧ ಜಲಾಶಯ ಗಳ ನಿರ್ಮಾಣಕ್ಕೆ ತನ್ನ ನೆಲವನ್ನು ಧಾರೆ ಎರೆದುಕೊಟ್ಟ ಹೊಸನಗರ ತಾಲ್ಲೂಕಿನಲ್ಲಿ ಇಂದು ಬರದ ಕರಿನೆರಳು ಕವಿದಿದೆ.

ಸುತ್ತಮುತ್ತ ಮುಳುಗಡೆ ನೀರನ್ನು ಹೊದ್ದು ಮಲಗಿದ್ದ ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಎದ್ದು ಕಾಣತೊಡಗಿದೆ. ತಾಲ್ಲೂಕಿನ ಹಲವೆಡೆ ನೀರಿನ ಬರ ಮೆಲ್ಲನೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ತೀವ್ರಗೊಳಿಸಿದೆ.

ಇದರಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ತತ್ವಾರ ಆರಂಭವಾಗಿದೆ. ಕಳೆದ ತಿಂಗಳಿಂದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಟ್ಯಾಂಕರ್ ಮೂಲಕ ನೀರು: ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ 6 ಗ್ರಾಮ ಪಂಚಾಯಿತಿಗಳ 22 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು ಅಲ್ಲಿ ಸ್ಥಳೀಯ ಆಡಳಿತ ಟ್ಯಾಂಕರ್ ಮತ್ತು ನೀರಿನ ಟ್ಯಾಂಕ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ.

ಮಾರುತೀಪುರ ಗ್ರಾಮ ಪಂಚಾಯಿತಿಯ ಪುಣಜೆ, ಬ್ರಹ್ಮೇಶ್ವರ, ಜೇನಿ ಗ್ರಾಮ ಪಂಚಾಯಿತಿಯ ಮಸಗಲ್ಲಿ ಮತ್ತು ಅರಮನೆ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯವೂ ಟ್ಯಾಂಕರ್ ಮತ್ತು ಟ್ಯಾಂಕುಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ನಿಟ್ಟೂರು ಗ್ರಾಮ ಪಂಚಾಯಿತಿಯ ಹೊಸನಾಡು, ಕೆ.ಬಿ. ಸರ್ಕಲ್, ಮಂಜಗಳಲೆ, ಕೋಟೆ ಶಿರೂರು, ಅಂಬ್ಲಾಡಿ, ಬೈಸಕಲ್, ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗೊಪ್ಪ, ಬಸವನ ಬ್ಯಾಣ, ಹಂಡೆಗದ್ದೆ, ನೋಲಿಗೇರಿ, ದೇವಗಂಗೆ, ಬೈಸೆ, ಹಿಲ್ಕುಂಜಿ, ಕೊಡಸೆ, ಅರೋಡಿ, ಅಂಡಗದೋದೂರು ಗ್ರಾಮ ಪಂಚಾಯಿತಿಯ ಕಬಳೆ, ರ್‍ಯಾವೆ ಮತ್ತಿತರ ಗ್ರಾಮಗಳಲ್ಲಿ ಟ್ಯಾಂಕರ್ ಬಳಸಿ ನೀರುಣಿಸಲಾಗುತ್ತಿದೆ.

ಮುಳುಗಡೆ ನೆಂಟಸ್ತನ: ಹೊಸನಗರವು ಲಿಂಗನಮಕ್ಕಿ, ವಾರಾಹಿ, ಚಕ್ರಾ, ಸಾವೇಹಕ್ಕಲು ಹೀಗೆ ನಾಲ್ಕು ಜಲಾಶಯಗಳ ಮುಳುಗಡೆ ಹಿನ್ನೀರಿನ ನೆಂಟಸ್ತನ ಹೊಂದಿದೆ. ಆದರೂ ಇಲ್ಲಿ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ.

ತಾಲ್ಲೂಕಿನ ಕೆರೆಹಳ್ಳಿ, ಹುಂಚಾ, ಕಸಬಾ ಹೋಬಳಿಗಿಂತ ಮುಳುಗಡೆ ಪ್ರದೇಶ ನಗರ ಹೋಬಳಿಯಲ್ಲೇ ಕುಡಿಯುವ ನೀರಿನ ಸಮಸ್ಯೆ ಎದ್ದಿದೆ. ಇಲ್ಲಿ ನಾಲ್ಕು ಜಲಾಶಯಗಳ ಹಿನ್ನೀರು 7 ತಿಂಗಳ ಕಾಲ ಅವರಿಸಿದ್ದರೂ ಉಳಿದ ತಿಂಗಳುಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣುತ್ತಿದೆ. ಮಳೆಗಾಲದ ದಿನಗಳಲ್ಲಿ ವಾರ್ಷಿಕ 600 ಸೆಂ.ಮೀ.ಗೂ ಹೆಚ್ಚು ಮಳೆ ಬೀಳುತ್ತಿದ್ದರೂ ಕುಡಿಯುವ ನೀರಿನ ಬವಣೆ ಕಾಣಿಸಿರುವುದು ಅಚ್ಚರಿಯಾಗಿದೆ.

ಕುಡಿಯುವ ನೀರು ನಿರ್ವಹಣೆಯಲ್ಲಿ ಅಗತ್ಯ ಕಾಮಗಾರಿ ನಿರ್ವಹಿಸುವುದಕ್ಕೆ ಗ್ರಾ.ಪಂಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !