ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದು ಬಿದ್ದ ಶತಮಾನದ ಅರಳಿ ಮರ

Last Updated 30 ಆಗಸ್ಟ್ 2018, 14:36 IST
ಅಕ್ಷರ ಗಾತ್ರ

ಶಿವಮೊಗ್ಗ: ಮತ್ತೂರಿನಲ್ಲಿ ನದಿ ತೀರದಲ್ಲಿದ್ದ 120 ವರ್ಷಗಳ,ಬಾರಿಗಾತ್ರದ ಅರಳಿಮರ ಉರುಳಿ ಬಿದ್ದು ಎರಡು ಮನೆ ಹಾಗೂ ಪಕ್ಕದಲ್ಲಿದ್ದ ದೇವಸ್ಥಾನದ ಯಾಗ ಮಂಟಪಕ್ಕೆ ಭಾಗಶಃ ಹಾನಿಯಾಗಿದೆ.

ಮರದ ಬೃಹತ್ ಕೊಂಬೆಗಳು ಮೂರು ಭಾಗವಾಗಿ ಬಿದ್ದಿವೆ.ಒಂದು ಭಾಗ ನದಿಗೆ, ಮತ್ತೊಂದುಭಾಗ ದೇವಾಲಯದ ಯಾಗಶಾಲೆಯ ಮೇಲೆ ಬಿದ್ದಿದೆ.ಒಂದು ಕೊಂಬೆ ಎರಡು ಮನೆಗಳ ಮೇಲೆ ಬಿದ್ದು ಹಾನಿಮಾಡಿದೆ.

ನೂರು ವರ್ಷ ಇಲ್ಲಿನ ಜನರಿಗೆ ಭಕ್ತಿಯ ತಾಣವಾಗಿತ್ತು. ದಣಿವಾದವರಿಗೆ ನೆರಳು ನಿಡಿತ್ತು. ಪಕ್ಷಿಗಳಿಗೆ ಆಶ್ರಯ ತಾಣವಾಗಿತ್ತು. ಇಡೀ ಗ್ರಾಮದ ಜನರಿಗೆ ಅದು ಭಾವನಾತ್ಮಕ ನೆಲೆಯಾಗಿತ್ತು ಎಂದುವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಮರ ಬಿದ್ದು ನೋವು ತೋಡಿಕೊಂಡರು. ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT