ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಲ್ಲಿ 12 ಪುರುಷರ ಸಾವು

ಹೆಚ್ಚುತ್ತಿದೆ ಕೋವಿಡ್‌ ಸೋಂಕು
Last Updated 10 ಮೇ 2021, 3:47 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್‌–19ನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಜಿಲ್ಲೆಯಲ್ಲಿ 24 ಗಂಟೆಗಳ ಅವಧಿ
ಯಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ಮೃತರಲ್ಲಿ 12 ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ. ಇತ್ತೀಚಿನ ಅಂಕಿಅಂಶಗಳನ್ನು ಗಮನಿಸಿದರೆ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತರಾಗುತ್ತಿರುವುದು ಕಂಡುಬರುತ್ತಿದೆ. ತುಮಕೂರು ನಗರ, ತಾಲ್ಲೂಕಿನಲ್ಲಿ 5, ಶಿರಾ 3, ತಿಪಟೂರು, ಪಾವಗಡ
ತಲಾ 2, ಮಧುಗಿರಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ತುಮಕೂರು ಎಸ್‌ಐಟಿ ಬಡಾವಣೆ 61 ವರ್ಷದ ಪುರುಷ, ಇದೇ ಬಡಾವಣೆಯ 54 ವರ್ಷದ ಮಹಿಳೆ, ಮಹಾಲಕ್ಷ್ಮಿ ನಗರದ 49 ವರ್ಷದ ಪುರುಷ, ಗೋಕುಲ ಬಡಾವಣೆ 67 ವರ್ಷದ ಪುರುಷ, ಶ್ರೀನಗರದ 43 ವರ್ಷದ ಮಹಿಳೆ ಮೃತಪಟ್ಟವರು.

ತಿಪಟೂರು ವಿದ್ಯಾನಗರ 55 ವರ್ಷದ ಪುರುಷ, ಹುಲಿಕುಂಟೆ ಗ್ರಾಮದ 38 ವರ್ಷದ ಪುರುಷ; ಶಿರಾ ತಾಲ್ಲೂಕು ಹಾರೋಗೆರೆ 33 ವರ್ಷದ ಪುರುಷ, ಬುವನಹಳ್ಳಿ 56 ವರ್ಷದ ಪುರುಷ, ಚಿಕ್ಕಅಗ್ರಹಾರದ 68 ವರ್ಷದ ಪುರುಷ; ಪಾವಗಡ ತಾಲ್ಲೂಕು ಚನ್ನಪ್ಪನಹಳ್ಳಿ ಗ್ರಾಮದ 49 ವರ್ಷದ ಪುರುಷ, ನಲಗನಹಳ್ಳಿ 47 ವರ್ಷದ ಪುರುಷ; ಮಧುಗಿರಿ ತಾಲ್ಲೂಕು ನಿಟ್ಟರಹಳ್ಳಿಯ 72 ವರ್ಷದ ಪುರುಷ; ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಿ ತಾಂಡ್ಯದ 50 ವರ್ಷದ ಪುರುಷ ಸಾವು ಕಂಡವರು.

ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು 801, ಶಿರಾ 734, ಚಿಕ್ಕನಾಯಕನಹಳ್ಳಿ 48, ಗುಬ್ಬಿ 82, ಕೊರಟಗೆರೆ 50, ಕುಣಿಗಲ್ 182, ಮಧುಗಿರಿ 120, ಪಾವಗಡ 102, ತಿಪಟೂರು 151, ತುರುವೇಕೆರೆ ತಾಲ್ಲೂಕಿನಲ್ಲಿ 145 ಜನರಿಗೆ ಸೋಂಕು ಖಚಿತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT