ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಖಾನೆ ನೌಕರನಿಗೆ ₹25 ಲಕ್ಷ ಮೋಸ

ಪ್ರತಿ ದಿನ ಶೇ 5ರಷ್ಟು ಲಾಭದ ಆಮಿಷ
Published 30 ಜೂನ್ 2024, 6:03 IST
Last Updated 30 ಜೂನ್ 2024, 6:03 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ತುಮಕೂರು: ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ದಿನ ಶೇ 5ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಕಾರ್ಖಾನೆ ನೌಕರ, ನಗರದ ವಸಂತನರಸಾಪುರದ ನಿವಾಸಿ ಭೂಪೇಂದ್ರಕುಮಾರ್‌ ಎಂಬುವರಿಗೆ ₹25 ಲಕ್ಷ ವಂಚಿಸಲಾಗಿದೆ.

ವಾಟ್ಸ್‌ ಆ್ಯಪ್‌ ಮುಖಾಂತರ ಪರಿಚಯಿಸಿಕೊಂಡು ‘ವಿಐಪಿ 73’ ಎಂಬ ಗ್ರೂಪ್‌ಗೆ ಸೇರಿಸಿ ಟ್ರೇಡಿಂಗ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಡಿಆರ್‌ಡಬ್ಲ್ಯೂಎಐ’ ಎಂಬ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಮೊದಲಿಗೆ ₹20 ಸಾವಿರ ಹಣವನ್ನು ಸೈಬರ್‌ ಆರೋಪಿಗಳು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂತರ ಭೂಪೇಂದ್ರಕುಮಾರ್‌ ಖಾತೆಗೆ ಲಾಭ ಎಂದು ₹4,331 ವರ್ಗಾಯಿಸಿದ್ದಾರೆ.

ಇದೇ ರೀತಿಯಾಗಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಭೂಪೇಂದ್ರಕುಮಾರ್‌ ಮೇ 6ರಿಂದ ಜೂನ್‌ 18ರ ವರೆಗೆ ಒಟ್ಟು ₹25,54,669 ಹಣ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಾಕಿದ್ದಾರೆ. ಅವರಿಗೆ ಯಾವುದೇ ಹಣ ವಾಪಸ್‌ ಹಾಕಿಲ್ಲ.

ನಂಬಿಸಿ ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT