ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ | ಕೊಬ್ಬರಿ ನಾಫೆಡ್ ಕೇಂದ್ರದಲ್ಲಿ ಹಣ ವಸೂಲಿ: ಆರೋಪ

Published 4 ಮೇ 2024, 15:52 IST
Last Updated 4 ಮೇ 2024, 15:52 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗಾಂಧಿಗ್ರಾಮದಲ್ಲಿನ ನಾಫೆಡ್ ಕೇಂದ್ರಕ್ಕೆ ಉಂಡೆಕೊಬ್ಬರಿ ಮಾರಾಟಕ್ಕೆ ಬರುವ ರೈತರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚುವರಿ ಕೊಬ್ಬರಿ ತೆಗೆದುಕೊಳ್ಳುವುದರ ಜತೆಗೆ ಹಣ ವಸೂಲಿ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದರು.

ತಾಲ್ಲೂಕಿನಲ್ಲಿ ಏಳು ಕೊಬ್ಬರಿ ಖರೀದಿ ನಾಫೆಡ್ ಕೇಂದ್ರ ತೆರೆಯಲಾಗಿದೆ. ದಬ್ಬೇಘಟ್ಟ ಹೋಬಳಿ ವ್ಯಾಪ್ತಿಗೆ ಬರುವ ಗಾಂಧಿಗ್ರಾಮದಲ್ಲಿನ ನಾಫೆಡ್ ಕೇಂದ್ರಕ್ಕೆ ನೋಂದಣಿಯಾಗಿರುವ ರೈತರು ತಮ್ಮ ಸರತಿಯಂತೆ ಕೊಬ್ಬರಿ ತರುತ್ತಿದ್ದಾರೆ.

ಇಲ್ಲಿಗೆ ಬರುವ ಪ್ರತಿಯೊಬ್ಬ ರೈತರಿಂದ ಪ್ರತಿ ಚೀಲಿಕ್ಕೆ ಹಮಾಲಿಗೆಂದು ₹30, ಬಿಲ್ ಹಾಕುವವರಿಗೆ ₹200, ಕೊಬ್ಬರಿ ಚೆಕ್ ಮಾಡುವವರಿಗೆ ಪ್ರತಿ ಕ್ವಿಂಟಾಲ್‌ಗೆ ₹100, ರೈತರಿಂದ ಖರೀದಿಯಾದ ಕೊಬ್ಬರಿಯನ್ನು ಬೇರೆಡೆ ತೆಗೆದುಕೊಂಡು ಹೋಗುವ ಲಾರಿಯವರಿಗೆ ಇಂತಿಷ್ಟು ಎಂದು ಒಟ್ಟಾರೆ ರೈತರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿದ್ದಾರೆಂಬ ಆರೋಪ ರೈತರದು.

ಇಂತಹ ಸಮಸ್ಯೆ ತಾಲ್ಲೂಕಿನ ಎಲ್ಲ ನಾಫೆಡ್ ಕೇಂದ್ರಗಳಲ್ಲೂ ಸಾಮಾನ್ಯವಾಗಿದ್ದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಎಲ್ಲಿ ತಮ್ಮ ಕೊಬ್ಬರಿ ಖರೀದಿಗೆ ಹಿನ್ನೆಡೆಯಾಗಬಹುದೆಂದು ಹೆದರಿ ಯಾವ ರೈತರೂ ಧ್ವನಿ ಎತ್ತುತ್ತಿಲ್ಲವೆಂದು ರೈತ ಮುಖಂಡರು ತಿಳಿಸಿದರು.

ಬಿಸಿಲಿಗೆ ನೀರಿಲ್ಲದೆ ತೆಂಗಿನ ಮರ ಒಣಗುತ್ತಿವೆ. ಇರುವ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಲು ಸಾವಿರಾರು ರೂಪಾಯಿ ಸಾಲಮಾಡಿ ಟ್ಯಾಂಕರ್ ನೀರು ಹೊಡೆಸಬೇಕು. ಸಂಕಷ್ಟದಲ್ಲಿರುವ ರೈತರ ಮೇಲೆ ನಾಫೆಡ್ ಅಧಿಕಾರಿಗಳು ಬರೆ ಎಳೆದರೆ ಬದುಕುವುದು ಹೇಗೆ ಎಂದು ರೈತ ಪುನೀತ್ ಅಲವತ್ತುಕೊಂಡರು.

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗಾಂಧಿಗ್ರಾಮದಲ್ಲಿನ ನಾಫೆಡ್ ಕೇಂದ್ರಕ್ಕೆ ರೈತರು ಟ್ಯಾಕ್ಟರ್ ಮೂಲಕ ಉಂಡೆಕೊಬ್ಬರಿ ತಂದಿರುವುದು.
ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗಾಂಧಿಗ್ರಾಮದಲ್ಲಿನ ನಾಫೆಡ್ ಕೇಂದ್ರಕ್ಕೆ ರೈತರು ಟ್ಯಾಕ್ಟರ್ ಮೂಲಕ ಉಂಡೆಕೊಬ್ಬರಿ ತಂದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT