ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾಲಯ ಸ್ಥಾಪನೆ

Last Updated 18 ಆಗಸ್ಟ್ 2020, 16:43 IST
ಅಕ್ಷರ ಗಾತ್ರ

ತುರುವೇಕೆರೆ: ಹಳ‍್ಳಿಗಾಡಿನ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗುವಂತೆ ಅಟಲ್ ಟಿಂಕರಿಂಗ್ (ವಿಜ್ಞಾನ ಕೇಂದ್ರ) ಪ್ರಯೋಗಾಲಯವನ್ನು ಪಟ್ಟಣದ ಜೆ.ಪಿ.ಆಂಗ್ಲಶಾಲೆಯಲ್ಲಿ ತೆರೆದಿರುವುದು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ನಾಗರಾಜ್ ಉಪಾಧ್ಯಾಯ ಶ್ಲಾಘಿಸಿದರು.

ಇಲ್ಲಿನ ಜೆ.ಪಿ.ಆಂಗ್ಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.

ಇದು ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷೆಯಾದ ಕೇಂದ್ರ ಯೋಜನೆಯಾಗಿದೆ. ಇಂತಹ ಯೋಜನೆ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಲಾ ಕಾರ್ಯದರ್ಶಿ ಪ್ರಕಾಶ್‍ ಗುಪ್ತಾ, ಅಟಲ್ ಟಿಂಕರಿಂಗ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಗುರುತಿಸಿ ₹20 ಲಕ್ಷ ಅನುದಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಗೆಳೆಯರ ಬಳಗದ ಅಧ್ಯಕ್ಷ ಎಂ.ವಿಶ್ವೇಶ್ವರಯ್ಯ ಮಾತನಾಡಿದರು. ಬ್ಯಾಂಕ್ ವ್ಯವಸ್ಥಾಪಕ ಶಿವರಾಂ ನಾಯಕ್, ಆಡಳಿತ ವರ್ಗದ ಖಜಾಂಚಿ ತಿರುಮಲಯ್ಯ, ನಿರ್ದೇಶಕ ನಜೀರ್ ಅಹಮದ್, ಜಿ.ಆರ್.ರಂಗೇಗೌಡ, ಟಿ.ಬಿ.ಮಂಜುನಾಥ್, ಕಾಂತರಾಜು, ಜಯಮ್ಮ, ನಾಗರತ್ನ, ಶಿವಲೀಲ, ಮಂಜುಳಾ, ಗುತ್ತಿಗೆದಾರ ರೇವಣ್ಣ, ಮುಖ್ಯಶಿಕ್ಷಕರಾದ ತುಕಾರಾಂ, ಲೂಸಿಯಾ, ಎಸ್.ಕೆ.ಥಾಮಸ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT