ಅನ್ನಸಂತರ್ಪಣೆ ವಿವಾದ; ದಲಿತನ ಮೇಲೆ ಹಲ್ಲೆ

ತುರುವೇಕೆರೆ: ತಾಲ್ಲೂಕಿನ ಹರಿದಾಸನಹಳ್ಳಿಯಲ್ಲಿ ಶನಿವಾರ ರಾತ್ರಿ ದೇವರ ಅನ್ನಸಂತರ್ಪಣೆ ವಿಚಾರವಾಗಿ ದಲಿತ ಯುವಕ ರುದ್ರನರಸಿಂಹ ಎಂಬುವವರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ಗ್ರಾಮದ ಭೂತಪ್ಪನ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆದಿತ್ತು. ಗೆಳೆಯರೊಂದಿಗೆ ರುದ್ರ ನರಸಿಂಹ ಊಟಕ್ಕೆ ಕುಳಿತ್ತಿದ್ದರು.
‘ಕೆಲವರಿಗೆ ಊಟ ಬಡಿಸಿ, ನಮಗೆ ಬಡಿಸಲಿಲ್ಲ’ ಎಂದು ರುದ್ರನರಸಿಂಹ ಮತ್ತು ಅವರ ಗೆಳೆಯರು ಪ್ರಶ್ನಿಸಿದರು ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಸರ್ವಣೀಯರು ಹಲ್ಲೆ ನಡೆಸಿದ್ದಾರೆ ಎಂದು ರುದ್ರನರಸಿಂಹ ಪೊಲೀಸ ರಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.