ಶಿರಾ: ತಾಲ್ಲೂಕಿನ ಮಾರನಗೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಿತಿನ್ ತುಳಸಿರಾಮ್ (40) ಎಂಬುವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ನಿತಿನ್ ತುಳಸಿರಾಮ್ ಪತ್ನಿ ಯಶೋದ ಅವರ ಮೊದಲ ಗಂಡನ ಮಗ ಹರೀಶ್ ಕೊಲೆ ಮಾಡಿದ ಆರೋಪಿ.

ಮಹಾರಾಷ್ಟ್ರದಿಂದ ಬಂದು ಶಿರಾ ತಾಲ್ಲೂಕಿನ ಮಾರನಗೆರೆ ಗ್ರಾಮದಲ್ಲಿ 3 ವರ್ಷದಿಂದ ಇದ್ದಿಲು ಸುಡುವ ಕೆಲಸ ಮಾಡಿಕೊಂಡಿದ್ದರು.

ನಿತಿನ್ ತುಳಸಿರಾಮ್ ಅವರು ಯಶೋದ ಅವರನ್ನು ಎರಡನೇ ಮದುವೆ ಮಾಡಕೊಂಡಿದ್ದರು. ಯಶೋದಗೆ ಸಹ ಇದು ಎರಡನೇ ಮದುವೆಯಾಗಿದ್ದು, ಮೊದಲ ಗಂಡ ರಾಮ್ ವಸಂತ್ ನಾಯ್ಕ ಎಂಬುವರಿಂದ ನರೇಶ್ ಮತ್ತು ಹರೀಶ ಎಂಬ ಇಬ್ಬರು ಮಕ್ಕಳಿದ್ದಾರೆ.

ಮಾರನಗೆರೆ ಗ್ರಾಮದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದು ಮಂಗಳವಾರ ರಾತ್ರಿ ನಿತಿನ್ ತುಳಸಿರಾಮ್ ಮತ್ತು ಯಶೋದ ನಡುವೆ ಜಗಳ ನಡೆದಿದೆ. ಆ ಸಮಯದಲ್ಲಿ ಹರೀಶ್ ಕೊಡಲಿಯಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ.

ತಾವರೆಕೆರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.