ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯ್ಯಪ್ಪ ದೇಗುಲ: ಸಮಸ್ಯೆ ಜೀವಂತವಾಗಿಡಲು ಯತ್ನ: ಮಾರನಗೆರೆ ವಿಜಯ ಕುಮಾರ್ ಆರೋಪ

Published 2 ಮಾರ್ಚ್ 2024, 14:15 IST
Last Updated 2 ಮಾರ್ಚ್ 2024, 14:15 IST
ಅಕ್ಷರ ಗಾತ್ರ

ತಿಪಟೂರು: ಕಲ್ಲೇಶ್ವರ ದೇವಾಲಯದ ಸಮೀಪದ ಅಯ್ಯಪ್ಪಸ್ವಾಮಿ ಟ್ರಸ್ಟ್‌ ದೇವಾಲಯಕ್ಕೆ ಶಾಸಕರು ಬೇರೆಡೆ ಜಾಗ ನೀಡಲೂ ಮುಂದಾದರೂ, ನಿವೃತ್ತ ಎಸಿಪಿ ಲೋಕೇಶ್ವರ ಅವರು ಜಾಗ ಪಡೆದುಕೊಳ್ಳಲು ಬಿಡದೆ, ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ನಗರಸಭಾ ಮಾಜಿ ಸದಸ್ಯ ಮಾರನಗೆರೆ ವಿಜಯ ಕುಮಾರ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಶಾಸಕ ಕೆ.ಷಡಕ್ಷರಿ ಬೇರೆಡೆಗೆ ಸಿಎ ಸೈಟ್ ನೀಡಿ ₹5 ಲಕ್ಷವನ್ನು ಶಾಸಕರ ನಿಧಿಯಿಂದ ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ ಲೋಕೇಶ್ವರ ವೈಯಕ್ತಿಕ ಹಿತಾಸಕ್ತಿ, ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕಲ್ಲೇಶ್ವರ ದೇವಾಲಯದ ಜಾಗವನ್ನು ಸರ್ಕಾರದಿಂದ ನೀಡಲು ಬರುವುದಿಲ್ಲ ಎಂಬ ತಿಳಿದಿದ್ದರೂ, ಜಾಗಕ್ಕೆ ಬೇಡಿಕೆ ಇಡುತ್ತ ಬೆಂಬಲಿಗರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ. ಶಾಸಕರ ಅನುದಾನದ ಜೊತೆಗೆ ಇತರರು ಸಹಕಾರ ನೀಡಲಿದ್ದು ಬೇರೆ ಕಡೆಗಳಲ್ಲಿ ಜಾಗ ಪಡೆದುಕೊಂಡರೆ ಸುಂದರವಾದ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.

ಕೋಟೆ ಮಂಜುನಾಥ್, ಗೊರಗೊಂಡನಹಳ್ಳಿ ಶಂಕರಪ್ಪ, ಪ್ರಕಾಶ್, ಹಾಲುಗೊಣ ಚೇತನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT