ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಭೈರವೇಶ್ವರ ಬ್ಯಾಂಕ್‌ಗೆ ₹1.95 ಕೋಟಿ ಲಾಭ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
Published : 15 ಸೆಪ್ಟೆಂಬರ್ 2024, 3:36 IST
Last Updated : 15 ಸೆಪ್ಟೆಂಬರ್ 2024, 3:36 IST
ಫಾಲೋ ಮಾಡಿ
Comments

ತುಮಕೂರು: ಭೈರವೇಶ್ವರ ಸಹಕಾರ ಬ್ಯಾಂಕ್‌ ₹47 ಕೋಟಿ ಠೇವಣಿ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ₹1.95 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಟಿ.ಆರ್.ವೆಂಕಟೇಶ್‌ ಬಾಬು ಹೇಳಿದರು.

ನಗರದಲ್ಲಿ ಶನಿವಾರ ಭೈರವೇಶ್ವರ ಸಹಕಾರ ಬ್ಯಾಂಕ್‌ನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.

ಬ್ಯಾಂಕ್‌ ಸೇವಾ, ಸಹಕಾರ ಕ್ಷೇತ್ರದಲ್ಲಿ ಯಶಸ್ವಿ ಹಾದಿಯಲ್ಲಿ ಸಾಗಿದೆ. ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರ ಅಳವಡಿಸಿಕೊಂಡಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಅನೇಕ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ ಎಂದರು.

ಬ್ಯಾಂಕ್ ಅನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸಿ ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ಬ್ಯಾಂಕ್‌ ಸದಸ್ಯರ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಬ್ಯಾಂಕ್‌ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಬ್ಯಾಂಕ್‌ ಉಪಾಧ್ಯಕ್ಷ ಆನಂದಕುಮಾರ್, ನಿರ್ದೇಶಕರಾದ ಆರ್.ಕೃಷ್ಣಯ್ಯ, ಎಚ್.ಎಸ್.ಮಂಜುನಾಥ್, ಎಸ್.ಆರ್.ಜಗದೀಶ್, ಬೆಳ್ಳಿ ಲೋಕೇಶ್, ಬೋರೇಗೌಡ, ಜಿ.ವಿ.ಆನಂದಮೂರ್ತಿ, ಜಿ.ನಾಗರಾಜು, ಬಿ.ಹನುಮಂತಯ್ಯ, ಟಿ.ಆರ್.ಚಿಕ್ಕರಂಗಣ್ಣ, ರಾಧಾ ದೇವರಾಜ್, ಸುಜಾತಾ ನಂಜೇಗೌಡ, ಪಿ.ಶಾಮಣ್ಣ, ಕೆ.ಬಿ.ಕಾಂತರಾಜು, ವಿ.ಮಹೇಂದ್ರ, ಬಿ.ಸಿ.ಶಿವಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮೇಗೌಡ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT