ಬುಧವಾರ, ಜನವರಿ 19, 2022
17 °C

ನೀಲಿ ನಾಲಿಗೆ ರೋಗ: 15 ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ತಿಪಟೂರು (ತುಮಕೂರು): ತಾಲ್ಲೂಕಿನ ಗೆದ್ದಲೇಹಳ್ಳಿ ಗೊಲ್ಲರಹಟ್ಟಿಯಲ್ಲಿ ನೀಲಿ ನಾಲಿಗೆ ರೋಗದಿಂದಾಗಿ 15ಕ್ಕೂ
ಹೆಚ್ಚು ಕುರಿಗಳು ಮೃತಪಟ್ಟಿವೆ. 

ಒಂದು ವಾರದಿಂದ ಕುರಿ ಹಾಗೂ ಮೇಕೆಗಳ ಮೂಗಿನಿಂದ ಗೊಣ್ಣೆ ಸುರಿಯುತ್ತಿದ್ದು, ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಓಡಾಡಲು ಆಗದೆ ನಿತ್ರಾಣಗೊಂಡ ಕುರಿಗಳು ನಿಂತ ಸ್ಥಳದಲ್ಲಿಯೇ
ಸಾವನ್ನಪ್ಪುತ್ತಿವೆ.

ಮಣಿಕಿಕೆರೆ ಗ್ರಾಮದ ಪಶುವೈದ್ಯಾಧಿಕಾರಿ ಹಾಗೂ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಕುರಿಗಾರರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.