ಮಂಗಳವಾರ, ಸೆಪ್ಟೆಂಬರ್ 22, 2020
21 °C
ಜಿಲ್ಲಾ ಬ್ರಾಹ್ಮಣ ಸಂಘದಿಂದ ವಿಪ್ರ ಭವನ ಉದ್ಘಾಟನಾ ಸಮಾರಂಭ

ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬ್ರಾಹ್ಮಣರು ಸ್ವಾವಲಂಬಿಗಳು. ಸಮಾಜವನ್ನು ಕಟ್ಟಿದವರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಸಮಾಜದ ಮುಖಂಡರಾದ ಎಚ್.ಜಿ.ಚಂದ್ರಶೇಖರ್ ನುಡಿದರು.

ನಗರದಲ್ಲಿ ನಡೆದ ವಿಪ್ರ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾವಲಂಬನೆಗೆ ಸ್ವಯಂ ಸ್ಫೂರ್ತಿಗೆ ಸಂಕಲ್ಪಕ್ಕೆ ಹೆಸರಾದವರು ಬ್ರಾಹ್ಮಣರು ಎಂದರು. 

ಭವನ ನಿರ್ಮಿಸಲು ನಿವೇಶನ ದಾನ ನೀಡಿದ ಲೆಕ್ಕ ಪರಿಶೋಧಕ ನರಸಿಂಹಮೂರ್ತಿ, ‘ತ್ರಿಮತಸ್ಥ ಬ್ರಾಹ್ಮಣರು ಒಂದಾಗಿ ಪ್ರಪಂಚಕ್ಕೆ ಮಾದರಿ ಆಗಬೇಕು. ನಾನು ಇಂದು ಸಂಪಾದಿಸಿದ ಹೆಸರು ಕೀರ್ತಿ ಎಲ್ಲವೂ ನನ್ನ ತಂದೆ ತಾಯಿಯರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

ಉದ್ಯಮಿ ಡಿ.ಆರ್.ಸುಬ್ರಮಣ್ಯ ಎಂ.ಡಿ.ಪೀಟ್‌ವೆಲ್, ಬ್ರಾಹ್ಮಣರಿಗೆ ಧೀ ಶಕ್ತಿಯು ಪೂರ್ವಜರಿಂದ ಬಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟ್ ನಾರಾಯಣ, ಬ್ರಾಹ್ಮಣರು ಸಹಜವಾಗಿಯೇ ಸರಳ ಜೀವಿಗಳು. ಎಂದಿಗೂ ಆಡಂಬರದ ಜೀವನ ನಡೆಸಿದವರಲ್ಲ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಆರ್.ನಾಗರಾಜ್‌ರಾವ್, ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಭವನ ನಿರ್ಮಿಸಲು ಸಹಾಯ ಮಾಡಿದ ಸಿ.ವಿ.ಕೇಶವಮೂರ್ತಿ, ಕೆ.ಹಿರಿಯಣ್ಣ, ಸಿ.ಎನ್.ರಮೇಶ್, ಇಂದುಮತಿ ಶ್ರೀನಿವಾಸ್, ಕೃಷ್ಣಮೂರ್ತಿ, ಭಾರದ್ವಾಜ್ ಅನಂತ್‌ರಾಮಯ್ಯ, ಡಾ.ಮುರಳೀಧರ್, ಸಿ.ಎ. ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಜ್ಯೋತಿ ಗಣೇಶ್, ಟಿ.ಕೆ.ರಾಘವೇಂದ್ರ, ಕೆ.ನಾಗಭೂಷಣ್ ಹಾಗೂ ಜಯಸಿಂಹರಾವ್, ಪ್ರೊ.ಟಿ.ಎನ್. ಪ್ರಭಾಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.