ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಮುಖಾಮುಖಿ ಡಿಕ್ಕಿ: ಚಾಲಕ, ಪ್ರಯಾಣಿಕರಿಗೆ ಗಾಯ

Published 4 ಏಪ್ರಿಲ್ 2024, 7:00 IST
Last Updated 4 ಏಪ್ರಿಲ್ 2024, 7:00 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಕೋಟಗುಡ್ಡ ಗ್ರಾಮದ ಬಳಿ ಬುಧವಾರ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ನಡೆದು ಕೆಎಸ್‌ಆರ್‌ಟಿಸಿ ಬಸ್ ಚಾಲಕ, ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ.

ಪಟ್ಟಣದಿಂದ ಚಿತ್ರದುರ್ಗ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಚಿತ್ರದುರ್ಗದಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ ಮುಖಾ‌ ಮುಖಿ ಡಿಕ್ಕಿಯಾಗಿವೆ.

ಸರ್ಕಾರಿ ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಅಪಘಾತ ನಡೆದ ಸ್ಥಳದಲ್ಲಿಯೇ ಗಾಯಾಳುಗಳನ್ನು ಮಲಗಿಸಿ ನೀರು ಕುಡಿಸಿ ಗ್ರಾಮಸ್ಥರು ಉಪಚರಿಸಿದರು. ಅಪಘಾತ ನಡೆದು ಅರ್ಧ ಗಂಟೆಯಾದರು ತುರ್ತು ವಾಹನ ಬರದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ವಾಹನಗಳಲ್ಲಿಯೇ ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು.

ಪಾವಗಡ ತಾಲ್ಲೂಕು ಕೋಟಗುಡ್ಡ ಬಳಿ ಬುಧವಾರ ಕೆ ಎಸ್ ಆರ್ ಟಿ ಸಿ ಖಾಸಗಿ ಬಸ್ ನಡುವೆ ಅಪಘಾತ ನಡೆಯಿತು.
ಪಾವಗಡ ತಾಲ್ಲೂಕು ಕೋಟಗುಡ್ಡ ಬಳಿ ಬುಧವಾರ ಕೆ ಎಸ್ ಆರ್ ಟಿ ಸಿ ಖಾಸಗಿ ಬಸ್ ನಡುವೆ ಅಪಘಾತ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT