ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಪ್ರೌಢಶಾಲೆ ಶಾಲೆ ಉಳಿವಿಗೆ ಆಂದೋಲನ

Published 1 ಆಗಸ್ಟ್ 2023, 7:07 IST
Last Updated 1 ಆಗಸ್ಟ್ 2023, 7:07 IST
ಅಕ್ಷರ ಗಾತ್ರ

ತುಮಕೂರು: ನಗರದ ನಿರ್ವಾಣಿ ಲೇಔಟ್‌ನ ಶಾರದಾ ದೇವಿ ನಗರದಲ್ಲಿರುವ ಜೆ.ಪಿ.ಪ್ರೌಢಶಾಲೆ ಮುಚ್ಚದಂತೆ ಪೋಷಕರು, ಶಾಲೆಯ ಹಳೆ ವಿದ್ಯಾರ್ಥಿಗಳು, ಹಿರಿಯ ಮುಖಂಡರು ಆಗ್ರಹಿಸಿದರು.

ಶಾಲೆ ಮುಚ್ಚುತ್ತಾರೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ಸೋಮವಾರ ಪ್ರಮುಖರು ಸಭೆ ನಡೆಸಿ, ಹಲವು ವಿಷಯಗಳ ಕುರಿತು ಚರ್ಚಿಸಿದರು.

ಪರಿಶಿಷ್ಟ ಸಮುದಾಯದ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಎನ್‌.ಆರ್‌.ಕಾಲೊನಿ, ಅಂಬೇಡ್ಕರ್ ನಗರದ ಬಡವರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಮುಚ್ಚಿದರೆ ಎಲ್ಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಶಾಲೆ ಉಳಿವಿಗೆ ಆಂದೋಲನ ರೂಪಿಸಬೇಕು ಎಂದು ಚಿಂತಕ ಕೆ.ದೊರೈರಾಜ್‌ ಕರೆ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಅನಂತ್‍ಕುಮಾರ್‌, ‘ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆಡೆ ಪ್ರವೇಶ ಪಡೆಯುತ್ತಿದ್ದಾರೆ. ಶಿಕ್ಷಕರ ನೇಮಕವಾದರೆ ಶಾಲೆ ಮುಂದುವರಿಸಬಹುದು’ ಎಂದು ಸಭೆಯ ಗಮನಕ್ಕೆ ತಂದರು.

ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಆಂಜಿನಪ್ಪ, ಮುಖಂಡರಾದ ಅಂಬಿಕಾ, ತಿಪ್ಪೇಸ್ವಾಮಿ, ವಿಜಯ್‍ಕುಮಾರ್, ಕೇಬಲ್ ರಘು, ಕೆ.ನರಸಿಂಹಮೂರ್ತಿ, ವೆಂಕಟೇಶ್, ವಿ.ಕೆಂಪರಾಜು, ಕಿಶೋರ್, ಗಂಗಾಧರ್, ಶಾಂತಕುಮಾರ್, ವಿ.ಗೋಪಾಲ್, ಪುಟ್ಟರಾಜು, ದಯಾನಂದ್, ಸುನೀಲ್, ಬಾಬು, ಟಿ.ಕೆ.ಕುಮಾರ್, ಮೋಹನ್, ಅರುಣ್, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT