ಗುರುವಾರ , ಮೇ 26, 2022
23 °C
ಅಂತರ ಜಿಲ್ಲಾಮಟ್ಟದ ರ್‍ಯಾಪಿಡ್ ಟೂರ್ನಿ

ತುರುವೇಕೆರೆ: ವ್ಯಕ್ತಿತ್ವ ವಿಕಸನಕ್ಕೆ ಚೆಸ್‌ ಆಟ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಚದುರಂಗ ಸ್ಪರ್ಧೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ನ್ಯೂ ತುಮಕೂರು ಡಿಸ್ಟಿಕ್ಟ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ತುರುವೇಕೆರೆ ಸ್ಪೋರ್ಟ್ಸ್ ಕ್ಲಬ್, ಲಯನ್ಸ್ ಕ್ಲಬ್ ಮತ್ತು ನ್ಯೂ ತುಮಕೂರು ಡಿಸ್ಟಿಕ್ ಅಸೋಸಿಯೇಷನ್ ಸಹಯೋಗದಡಿ ಏರ್ಪಡಿಸಿದ್ದ ಅಂತರ ಜಿಲ್ಲಾಮಟ್ಟದ ರ್‍ಯಾಪಿಡ್ ಚದುರಂಗ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಮೆದುಳಿಗೆ ಕಸರತ್ತು ನೀಡುವ ಕ್ರೀಡೆಗಳಲ್ಲಿ ಚದುರಂಗ ಅತಿಮುಖ್ಯ. ಹಾಗೆಯೇ ಚದುರಂಗ ಮೆದುಳಿನ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಪ್ರೇರೇಪಿಸಲಿದೆ. ಈ ನಿಟ್ಟಿನಲ್ಲಿ ಭಾಗವಹಿಸಿದ ಆಟಗಾರರು ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸೋಲೇ ಗೆಲುವಿನ ಮೆಟ್ಟಿಲೆಂದು ಸಮನಾಗಿ ಸ್ವೀಕರಿಸುವುದರ ಮೂಲಕ ಗುರಿ ಸಾಧಿಸಬೇಕು ಎಂದರು. 

ಮುಂದಿನ ದಿನಗಳಲ್ಲಿ 50 ದೇಶದ ಆಟಗಾರನ್ನೊಳಗೊಂಡ ಚೆಸ್ ಟೂರ್ನಿಯನ್ನು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ.ಪಂ. ಅಧ್ಯಕ್ಷ ಅಂಜನ್ ಕುಮಾರ್ ಮಾತನಾಡಿ, ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಒತ್ತಡ ಮುಕ್ತ ವಾತಾವರಣದಲ್ಲಿ ಆಡುವಂತೆ ಪ್ರೇರೇಪಿಸಬೇಕು. ಆಟಗಾರರು ತಾವು ಮಾಡಿದ ತಪ್ಪು ಮರೆಯಬಾರದು. ತಪ್ಪು ನಡೆ ಮುಂದೆ ಸರಿಯಾದ ನಡೆಗೆ ಕಾರಣವಾಗಲಿದೆ ಎಂದರು.

ಪ್ರಜ್ವಲ್‌ (ಪ್ರಥಮ), ಆನಂದ್(ದ್ವಿತೀಯ), ದೀಕ್ಷಿತ್(ತೃತೀಯ) ಬಹುಮಾನ ಪಡೆದರು. 35ಕ್ಕೂ ಹೆಚ್ಚು ವಿವಿಧ ಶ್ರೇಣಿ ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು.

ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟಿಎವಿ ಗುಪ್ತಾ, ಕಾಸ್ಮೋ ಕ್ಲಬ್ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಮಿಹಿರಕುಮಾರ್, ಸ್ಪೋರ್ಟ್ಸ್ ಕ್ಲಬ್‍ ಸ್ಥಾಪಕ ಅಧ್ಯಕ್ಷ ಡಾ.ಎ. ನಾಗರಾಜ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಪಿ.ಎಚ್. ಧನಪಾಲ್, ಎನ್.ಜೆ. ಅನಿಲ್, ಡಾ.ಚೌಧರಿ ನಾಗೇಶ್, ರಾಜಣ್ಣ, ವಿರೂಪಾಕ್ಷ, ಟಿ.ವಿ. ಮಹೇಶ್, ಸುನಿಲ್‌ ಕುಮಾರ್, ಸುನಿಲ್ ಬಾಬು, ವಿರೂಪಾಕ್ಷ, ಹುಲಿಕೆರೆ ಲೋಕೇಶ್, ತುಕಾರಾಮ್, ಗಂಗಾಧರ ದೇವರಮನೆ, ಬಸವರಾಜು, ರವಿ, ಲೋಕೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.