ತುರುವೇಕೆರೆ ತಾಲ್ಲೂಕಿನ ಹುಲ್ಲೇಕೆರೆಯಲ್ಲಿ ಕಾಂಡ ಸೋರುವ ರೋಗಕ್ಕೆ ತೆಂಗಿನ ಮರದ ಸುಳಿ ಬಿದ್ದಿದೆ
ಕೊಳೆರೋಗಕ್ಕೆ ತುತ್ತಾದ ತೆಂಗಿನ ಸಸಿ
ಹವಮಾನ ವೈಪರೀತ್ಯ ಮಳೆಕೊರತೆಯಿಂದ ತಾಲ್ಲೂಕಿನಲ್ಲಿ ಕಾಂಡ ಸೋರುವುದು ಬಿಣನೊಣ ಅಣಬೆ ರೋಗ ಕೆಂಪು ಮೂತಿ ಗರಿ ಉದುರುವುದು ಸುಳಿ ಬೀಳುವ ರೋಗಗಳಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ರೋಗ ನಿಯಂತ್ರಣಕ್ಕೆ ಅರಿವು ಮೂಡಿಸಬೇಕು
ಮಾಚೇನಹಳ್ಳಿ ಮಲ್ಲಿಕಾರ್ಜುನ್ ತೆಂಗು ಬೆಳೆಗಾರರ ಸಂಘದ ನಿರ್ದೇಶಕ
ತೆಂಗಿನ ಕಾಯಿ ಕೊಬ್ಬರಿಗೆ ಚಿನ್ನದ ಬೆಲೆ ಇದೆ. ಆದರೆ ಕಾಂಡ ಸೋರುವುದು ಬಿಳಿನೊಣ ಬಾಧೆ ಇದೆ. ಎಷ್ಟೇ ಗೊಬ್ಬರ ನೀರು ಔಷಧಿ ಹಾಕಿದರೂ ಮರಗಳಲ್ಲಿ ಹೊಂಬಾಳೆ ಮತ್ತು ಹರಳು ಸರಿಯಾಗಿ ಕಟ್ಟುತ್ತಿಲ್ಲ. ತೆಂಗು ಬೆಳೆಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು
ಶಾಂತಯ್ಯ ಅಕ್ಕಳಸಂದ್ರ ಗೊಲ್ಲರಹಟ್ಟಿ
ವಿಜ್ಞಾನಿಗಳಿಂದ ನಿಯಂತ್ರಣ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ರೈತರು ತೋಟಗಾರಿಕೆಯಿಂದ ಸಿಗುವ ಔಷಧಿ ಮಾಹಿತಿ ಪಡೆದು ರೋಗ ನಿಯಂತ್ರಿಸಬೇಕು. ರೋಗ ಲಕ್ಷಣ ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ