ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೂರು ಬಸ್‌ ಡಿಪೊ ಉದ್ಘಾಟನೆ

Last Updated 3 ಮಾರ್ಚ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ಪುರ ಬಳಿಯ ಮಂಡೂರಿನಲ್ಲಿ ನಿರ್ಮಿಸಿರುವ ಬಿಎಂಟಿಸಿ ಬಸ್ ಡಿಪೊವನ್ನು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಶಾಸಕ ಅರವಿಂದ ಲಿಂಬಾವಳಿ ಗುರುವಾರ ಉದ್ಘಾಟಿಸಿದರು.

3 ಎಕರೆ 39 ಗುಂಟೆ ವಿಸ್ತೀರ್ಣದ ಈ ಡಿಪೊವನ್ನು ₹ 3.49 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ನಿಲ್ದಾಣದಿಂದ ಪ್ರತಿದಿನ 84 ಬಸ್‌ಗಳು ಸಂಚರಿಸಲಿವೆ.

ಆವಲಹಳ್ಳಿ, ಅನಗೊಂಡನಹಳ್ಳಿ, ಭಟ್ಟರ ಮಾರೇನಹಳ್ಳಿ, ಬಿದಲಾಪುರ, ಚಿಕ್ಕತಿರುಪತಿ, ಚೀಮಸಂದ್ರ, ದೇವನಗುಂದಿ, ದೇವಶೆಟ್ಟಿಹಳ್ಳಿ, ದೊಡ್ಡಬನಹಳ್ಳಿ, ಹಂಚರಹಳ್ಳಿ, ಹಂದೇನಹಳ್ಳಿ, ಹುಸ್ಕೂರು, ಜ್ಯೋತಿಪುರ, ಕಗ್ಗಲಹಳ್ಳಿ, ಕನ್ನಮಂಗಲ, ಕಟ್ಟುಗೊಲ್ಲಹಳ್ಳಿ, ಮಾಕನಹಳ್ಳಿ, ಮಾರಸಂದ್ರ, ರಾಂಪುರ, ಸಂಪಂಗೆರೆ, ತಿರುಮೇನಹಳ್ಳಿ, ಚೌಡೇಶ್ವರಿ ಜೆ.ಪಿ.ಪಾರ್ಕ್, ಅರೇಹಳ್ಳಿ, ಕೊರಳೂರು, ಮಂಡೂರು, ಪಟ್ಟಂದೂರು ಅಗ್ರಹಾರ, ಪಿಚ್ಚಗುಂಟರಹಳ್ಳಿ, ತರಬಹಳ್ಳಿ, ಹೆಬ್ಬಾಳ, ಕಟ್ಟಿಗೇನಹಳ್ಳಿ ಮತ್ತು ದೇವನಹಳ್ಳಿ ಮಾರ್ಗಗಳಲ್ಲಿ ಡಿಪೊ ಬಸ್‌ಗಳು ಸಂಚಾರ ನಡೆಸಲಿವೆ.

ಏನೇನು ಸೌಲಭ್ಯ: ಆಡಳಿತ ಕಚೇರಿ, ಘಟಕ ವ್ಯವಸ್ಥಾಪಕರ ಕೊಠಡಿ, ನಗದು ಮತ್ತು ಚೀಟಿ ಶಾಖೆ, ಮಹಿಳಾ ಸಿಬ್ಬಂದಿ ವಿಶ್ರಾಂತಿ ಕೊಠಡಿ, 6 ದುರಸ್ತಿ ಅಂಕಣ, ಉಗ್ರಾಣ ಶಾಖೆ ಹಾಗೂ ತಾಂತ್ರಿಕ ಸಿಬ್ಬಂದಿ ಕೊಠಡಿಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT