ತುಮಕೂರು ಜಿಲ್ಲೆ ಪ್ರತಿಭೆಗಳ ಪ್ರಯತ್ನ ಅತ್ಯುತ್ತಮ: ಡಾ.ವೈ.ಕೆ.ಪುಟ್ಟಸ್ವಾಮೇಗೌಡ

7
ನಾಗರಿಕ ಸೇವಾ ಪರೀಕ್ಷಾ ಪ್ರವೇಶ–2018ರ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಉದ್ಘಾಟನೆ

ತುಮಕೂರು ಜಿಲ್ಲೆ ಪ್ರತಿಭೆಗಳ ಪ್ರಯತ್ನ ಅತ್ಯುತ್ತಮ: ಡಾ.ವೈ.ಕೆ.ಪುಟ್ಟಸ್ವಾಮೇಗೌಡ

Published:
Updated:
Deccan Herald

ತುಮಕೂರು: 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಆಡಳಿತಾತ್ಮಕ ಸೇವಾ ಪರೀಕ್ಷೆಗಳಲ್ಲಿ ಕರ್ನಾಟಕದ ಫಲಿತಾಂಶ ತೀರಾ ನಿರಾಶದಾಯಕವಾಗಿದ್ದರೂ ಕರ್ನಾಟಕದ ಮಟ್ಟಿಗೆ ತುಮಕೂರು ಜಿಲ್ಲೆಯ ಪ್ರತಿಭೆಗಳ ಸಾಧನೆ ಅತ್ಯುತ್ತಮವಾಗಿದೆ' ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ವೈ.ಕೆ.ಪುಟ್ಟಸ್ವಾಮೇಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ದೇವರಾಜ ಅರಸು ಅಧ್ಯಯನ ಪೀಠ ಕೃಷಿಕ್ ಸರ್ವೋದಯ ಫೌಂಡೇಷನ್ ತುಮಕೂರು ಶಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ ನಾಗರಿಕ ಸೇವಾ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'ಕರ್ನಾಟಕದ ವಿದ್ಯಾರ್ಥಿಗಳು ಆಡಳಿತಾತ್ಮಕ ಕ್ಷೇತ್ರ ಪ್ರವೇಶಿಸಿ ಸಾಧನೆ ಮಾಡಬೇಕು. ನಾಡಿಗೆ ಕೀರ್ತಿ ತರಬೇಕು' ಎಂದು ಹೇಳಿದರು.

ಬೆಂಗಳೂರು ಕೃಷಿ ವಿವಿ ನಿವೃತ್ತ ಕುಲಪತಿ ನಾರಾಯಣಗೌಡ ಮಾತನಾಡಿ,‘ ಕರಾವಳಿ ಜಿಲ್ಲೆಯು ಹೇಗೆ ರ್‍ಯಾಂಕಿಂಗ್‌ಗೆ ಹೆಸರುವಾಸಿಯಾದ ಹಾಗೆ ತುಮಕೂರು ಜಿಲ್ಲೆ ಕೇಂದ್ರ ನಾಗರಿಕ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಸಿದ್ಧಿಯಾಗಿದೆ’ ಎಂದು ತಿಳಿಸಿದರು.

‘ಐದು ವರ್ಷದ ಬಾಲಕನಾಗಿರುವಾಗ ಎರಡೂ ಕಣ್ಣು ಕಳೆದುಕೊಂಡ ಕುಣಿಗಲ್‌ನ ಮಲ್ಲಿಕಾರ್ಜುನ್ ಅವರು ಐಎಎಸ್ ಮಾಡಿ ದೆಹಲಿಯಲ್ಲಿ ಅಧಿಕಾರಿಯಾಗುವುದು ಸಾಧ್ಯವಿದ್ದರೆ ನಿಮಗೆ ಯಾಕೆ ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳನ್ನು ಹುರುದುಂಬಿಸಿದರು.

ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ.ವೈ.ಎಸ್.ಸಿದ್ಧೇಗೌಡ ಮಾತನಾಡಿ,‘ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ವಿವಿ ವ್ಯಾಪ್ತಿಯ 400 ಮಂದಿ ವಿದ್ಯಾರ್ಥಿಗಳು ಹಾಜರಾಗುವುದು ಸಂತೋಷದ ಸಂಗತಿ. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವಿವಿಯು ಕಟಿಬದ್ಧವಾಗಿದೆ’ ಎಂದು ಹೇಳಿದರು.

ಐಎಎಸ್ ಹಿರಿಯ ಅಧಿಕಾರಿ ಅಮರ್ ನಾರಾಯಣ, ಡಾ.ಜೀವನ್‌ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಯೋಜಕರಾದ ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಕೃಷಿಕ್ ಸರ್ವೋದಯ ಫೌಂಡೇಷನ್ ಅಧ್ಯಕ್ಷ ಚಿಕ್ಕಣ್ಣ, ಪ್ರೊ.ಚಂದ್ರಣ್ಣ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !