ಸೋಮವಾರ, ಅಕ್ಟೋಬರ್ 26, 2020
20 °C

ಮಿನಿ ವಿಧಾನಸೌಧ ಉದ್ಘಾಟನೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಮೂಲ ಸೌಕರ್ಯ ಒದಗಿಸದೆ, ಕ್ಷೇತ್ರದಲ್ಲಿ ಶಾಸಕರಿಲ್ಲದ ಸಮಯದಲ್ಲಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಮನೆಯ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಕಾರ್ಯಕರ್ತರನ್ನು ಪ್ರವಾಸಿ ಮಂದಿರದ ವೃತ್ತದಲ್ಲಿ ಪೊಲೀಸರು ತಡೆದರು. ಅಲ್ಲಿಯೇ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮೂಲ ಸೌಕರ್ಯವಿಲ್ಲದ ಕಟ್ಟಡ ಉದ್ಟಾಟಿಸಲಾಗುತ್ತಿದೆ. ಶಾಸಕರಿಲ್ಲದಾಗ ಕಟ್ಟಡ ಉದ್ಘಾಟಿಸುತ್ತಿದ್ದು ಶಿರಾ ತಾಲ್ಲೂಕಿನ ಜನರಿಗೆ ಅಪಮಾನ ಮಾಡಲಾಗುತ್ತಿದೆ. ಉದ್ಘಾಟನೆ ಮುಂಡೂದುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಮುಖಂಡರಾದ ಡಿ.ಸಿ.ಆಶೋಕ್, ಗುಳಿಗೇನಹಳ್ಳಿ ನಾಗರಾಜು, ಅರೇಹಳ್ಳಿ ರಮೇಶ್, ಎನ್.ಸಿ. ದೊಡ್ಡಯ್ಯ, ದಿವಾಕರ್ ಗೌಡ, ನೂರುದ್ದೀನ್, ಭಾನು ಪ್ರಕಾಶ್, ದೇವರಾಜು ಯಾದವ್, ಸತ್ಯನಾರಾಯಣ, ದಯಾನಂದ, ಷಣ್ಮುಖಪ್ಪ, ವಾಜರಹಳ್ಳಿ ರಮೇಶ್, ಬಾಲೇನಹಳ್ಳಿ ಪ್ರಕಾಶ್, ಎಚ್.ಎಲ್. ರಂಗನಾಥ್, ಪಿ.ಬಿ.ನರಸಿಂಹಯ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು