ಭಾನುವಾರ, ಜುಲೈ 3, 2022
24 °C

ಹೋರಾಟದ ಹಾಡು: ಇಂದು ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಹೋರಾಟದ ಹಾಡುಗಳಿಂದ ಏನನ್ನು ಕಲಿಯ ಬಹುದು’ ಎಂಬ ವಿಷಯದ ಕುರಿತು ಮಂಗಳವಾರ ಸಂವಾದ ನಡೆಯಲಿದೆ.

ಓದು ವಿದ್ಯಾರ್ಥಿ ಬಳಗದ ಮೂರನೇ ಸಂಚಿಕೆಯ ಕಾರ್ಯಕ್ರಮವಾಗಿ ಈ ಸಂವಾದ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಜೂಮ್ ಮೀಟ್‌ ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ಸಂವಾದ ನಡೆಯಲಿದೆ.

ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಬಿ.ಎಂ. ಪುಟ್ಟಯ್ಯ ಅವರು ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ತಿಪಟೂರು ಯುವಕವಿ ಎಸ್.ಕೆ. ಮಂಜುನಾಥ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಧನುಷ್ ಎಚ್. ಶೇಖರ್ ಸಂವಾದಕ್ಕೆ ಪ್ರತಿಕ್ರಿಯೆ ನೀಡಲಿದ್ದಾರೆ. ಬಳಗದ ಸಂಚಾಲಕ ನಾಗಭೂಷಣ ಬಗ್ಗನಡು ಉಪಸ್ಥಿತರಿರುವರು.

ಮೀಟಿಂಗ್ ಐಡಿ: 9892827118, ಪಾಸ್‍ವರ್ಡ್: 2JELyg ಅಥವಾ https://us05web.zoom.us/j/9892827118?pwd=KzBxbVdaTDgwSVdJUW1ONU8zS3NCUT09 ಲಿಂಕ್ ಮೂಲಕ ಸಂವಾದದಲ್ಲಿ ಪಾಲ್ಗೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು