ಮಂಗಳವಾರ, ಏಪ್ರಿಲ್ 7, 2020
19 °C

ಲಾಕ್‌ಡೌನ್‌ ಹಿನ್ನೆಲೆ: ಔಷಧ, ದಿನಸಿ ಅಂಡಿಗಳ ಮುಂದೆ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಏ ನೀವು ಆ ಬಾಕ್ಸ್‌ನಲ್ಲಿ ನಿಲ್ಲಿ. ದೂರ ನಿಲ್ರಿ, ದೂರ’ ನಗರದಲ್ಲಿ ತೆರೆದಿರುವ ದಿನಸಿ ಅಂಗಡಿಗಳು, ಔಷಧ ಅಂಗಡಿಗಳ ಬಳಿ ಕೇಳಿ ಬರುವ ಮಾತಿದು.

ಅಗತ್ಯ ವಸ್ತುಗಳು ದೊರೆಯುತ್ತವೆ ಎನ್ನುವುದು ನಾಗರಿಕರಿಗೆ ಖಚಿತವಾದ ನಂತರ ದಿನಸಿ ಅಂಗಡಿಗಳ ಮುಂದೆ ಹೆಚ್ಚು ದಟ್ಟಣೆಯೇನೂ ಇಲ್ಲ. ಎಲ್ಲ ಮೆಡಿಕಲ್ ಸ್ಟೋರ್‌ಗಳು ತೆರದಿದ್ದು ಜನರು ಅಲ್ಲಿ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಅಂಗಡಿಗಳ ಎದುರು ಜನರು ಅಂತರಕಾಯ್ದುಕೊಳ್ಳುವ ದೃಷ್ಟಿಯಿಂದ ಬಣ್ಣ, ಸುಣ್ಣಗಳಿಂದ ಬಾಕ್ಸ್ ಇಲ್ಲವೆ ವೃತ್ತಗಳನ್ನು ಬರೆಯಲಾಗಿದೆ. ಖರೀದಿಗೆ ಬರುವ ಗ್ರಾಹಕರು ಈ ವೃತ್ತದೊಳಗೆ ನಿಲ್ಲುತ್ತಿದ್ದಾರೆ. ಎಲ್ಲರೂ ಸ್ವಯಂ ಜಾಗೃತರಾಗಿ ಅಂತರಕಾಯ್ದುಕೊಳ್ಳುತ್ತಿದ್ದಾರೆ. ಕೆಲವರು ಎಚ್ಚರ ತಪ್ಪಿದರೆ ಅಂಗಡಿಗಳ ಮಾಲೀಕರೇ ‘ನೀವು ಅಲ್ಲಿ ನಿಲ್ಲಿ. ಆ ಬಾಕ್ಸ್‌ನೊಳಗೆ ಇರಿ’ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ.

ಎಳನೀರು ಅಂಗಡಿಗಳು, ಮಟನ್ ಸ್ಟಾಲ್‌ಗಳ ಎದುರು ಸಹ ಈ ಅಂತರ ಕಾಯ್ದುಕೊಳ್ಳುವಿಕೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು