ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಬೆದರಿಕೆ: ಆರೋಪಿಗಳಿಗೆ 4 ವರ್ಷ ಕಠಿಣ ಶಿಕ್ಷೆ

Last Updated 12 ಜುಲೈ 2019, 12:47 IST
ಅಕ್ಷರ ಗಾತ್ರ

ತುಮಕೂರು: ನಗರದ ತಿಲಕ್‌ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಿಪ್ಪೇಶ ಹಾಗೂ ಲಕ್ಷ್ಮಣ್ ಎಂಬುವವರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದ ರಂಗಪ್ಪ, ಭೀಮಣ್ಣ ಹಾಗೂ ಭೀಮಣ್ಣ ಎಂಬ ಮೂರು ಮಂದಿ ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ 4 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 15 ಸಾವಿರ ದಂಡ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಆರೋಪಿಗಳು 2018ರರ ಮಾರ್ಚ್ 10ರಂದು ರಿಂಗ್ ರಸ್ತೆಯ ಡಿಎಟಿ ಮಸೀದಿ ಬಳಿ ತಿಪ್ಪೇಶ ಮತ್ತು ಲಕ್ಷ್ಮಣ ಎಂಬುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಉದ್ದೇಶದಿಂದ ಇಬ್ಬರಿಗೂ ಇಟ್ಟಿಗೆಯಿಂದ ತೀವ್ರ ಸ್ವರೂಪದಲ್ಲಿ ಹಲ್ಲೆ ನಡೆಸಿದ್ದರು.

ದಂಡದ ಮೊತ್ತದಲ್ಲಿ ₹ 25 ಸಾವಿರವನ್ನು ಗಾಯಾಳು ಲಕ್ಷ್ಮಣ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ತೀರ್ಪು ನೀಡಿದೆ. ಲಕ್ಷ್ಮಯ್ಯ ಎಂ.ಬಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕಿ ಕೆ.ಎಚ್.ಶ್ರೀಮತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT