ಭಾನುವಾರ, ಸೆಪ್ಟೆಂಬರ್ 22, 2019
22 °C

ಮಹಿಳೆ ಮೇಲೆ ಡೀಸೆಲ್ ಸುರಿದು ಕೊಲೆಗೆ ಯತ್ನ

Published:
Updated:

ಕೊರಟಗೆರೆ: ಕುಡಿದ ಅಮಲಿನಲ್ಲಿ ಹೆಂಡತಿ ಮೈಮೇಲೆ ಡೀಸೆಲ್ ಸುರಿದು‌ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ‌ ಸೋಂಪುರ ಗ್ರಾಮದಲ್ಲಿ ನಡೆದಿದೆ.

ಪತ್ನಿ ತಸ್ಲೀಮಾ ಬಾನು (35)ಗೆ ಪತಿ ಜಿಯಾ ಉಲ್ಲಾ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕುಡಿತಕ್ಕೆ ದಾಸನಾಗಿದ್ದ ಜಿಯಾ ಉಲ್ಲಾ ಕ್ಷುಲಕ ಕಾರಣಕ್ಕೆ ಬುಧವಾರ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ದೇಹದ ಮೇಲೆ ಹೆಚ್ಚು ಸುಟ್ಟ ಗಾಯಗಳಾಗಿವೆ. ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಸ್ಥಳಕ್ಕೆ ಸಿಪಿಐ ಎಫ್.ಕೆ.ನದಾಫ್‌ ಭೇಟಿ ನೀಡಿದ್ದರು.‌ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)