ಶುಕ್ರವಾರ, ಜೂನ್ 25, 2021
30 °C
ಲಸಿಕೆ ಕೇಂದ್ರದ ಅವ್ಯವಸ್ಥೆ,

ಲಸಿಕೆ ಪಡೆಯಲು ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ಮಹಡಿ ಮೇಲೆ ಪ್ರಾರಂಭಿಸಿರುವ ಕೋವಿಡ್ ಲಸಿಕಾ ವಿತರಣ ಕೇಂದ್ರದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರದಿಂದ 18ರ ವಯಸ್ಸಿನ ನಂತರದವರಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದಲ್ಲಿ ನೂರಾರು ಜನ ಲಸಿಕೆ ಪಡೆಯಲು ಬಂದಿದ್ದು, ಪಕ್ಕದಲ್ಲಿಯೇ ಇರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಜತೆಯಲ್ಲಿ ಅವರ ನಿಗಾ ವಹಿಸಲು ಬಂದ ಸಂಬಂಧಿಗಳು ಮತ್ತು ಸೋಂಕಿತರಾಗಿ ಚಿಕಿತ್ಸೆಗಾಗಿ ದಾಖಲಾಗಲು ಬಂದವರು ಓಡಾಡುತ್ತಿದ್ದದನ್ನು ಗಮನಿಸಿ ವಿಚಲಿತರಾಗಿದ್ದಾರೆ.

ಕೇಂದ್ರವೂ ಮಹಡಿ ಮೇಲೆ ಇರುವುದರಿಂದ ಹತ್ತಲು ಸಾಧ್ಯವಾಗದ ಸ್ಥಿತಿ ಹಿರಿಯ ನಾಗರಿಕರದ್ದಾಗಿದೆ. ಪಕ್ಕದಲ್ಲೇ ಕೋವಿಡ್ ಕೇರ್ ಸೆಂಟರ್ ಇದ್ದು, ನಿತ್ಯವೂ 70 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರು ಯಾರಿಗೆ ಸೋಂಕು ಹರಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಲಸಿಕೆ ವಿತರಣೆಯನ್ನು ಸೂಕ್ತ ಜಾಗದಲ್ಲಿ ನೀಡವ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವಂತೆ ತಾಲ್ಲೂಕು ಒಕ್ಕಲಿಗ ಸಂಘದ ನಿರ್ದೇಶಕ ಬಿ.ಎಂ.ಹುಚ್ಚೆಗೌಡ ತಿಳಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣೆಗಾಗಿ, ಸೋಂಕಿತರು ಸಹ ಹೆಚ್ಚಾಗುತ್ತಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರುಕೋವಿಡ್ ಕೇರ್ ಸೆಂಟರ್ ನಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಸೆಂಟರ್ ನಲ್ಲಿ ಸೋಂಕಿತರೊಂದಿಗೆ ನಿಗಾ ವಹಿಸಲು ಬರುತ್ತಿರುವರ ಸಮಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ವಾದ, ವಿವಾದಗಳು ನಡೆಯುತ್ತಿದ್ದು, ಸಾರ್ವಜನಿಕ ಆಸ್ಪತ್ರೆ ಕೋವಿಡ್‌ ನಿಯಂತ್ರಣ ಕೇಂದ್ರವಾಗುವ ಬದಲು ಕೊರೊನಾ ಪಸರಿಸುವ ಕೇಂದ್ರವಾಗುತ್ತಿದೆ. ಇಂತಹ ಸಮಯದಲ್ಲಿ ನೂರಾರು ಯುವಕರು ಲಸಿಕೆ ಪಡೆಯಲು ಬರುತ್ತಿದ್ದಾರೆ. ಪ್ರತ್ಯೇಕ ವ್ಯವಸ್ಥೆ ಕೆಳ ಭಾಗದಲ್ಲಿಯೊ ಅಥವಾ ಬೇರೆಡೆ ಪ್ರಾರಂಭಿಸಲು ಲಯನ್ಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮನೋಹರ್ ಮನವಿ ಮಾಡಿದ್ದಾರೆ.

ಕನ್ನಡ ಭವನದಲ್ಲಿ ಲಸಿಕೆ ವಿತರಣೆ ಕೇಂದ್ರ ಪ್ರಾರಂಬಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಆಹ್ವಾನ ನೀಡಿದ್ದರು. ಸಾರ್ವಜನಿಕ ಆಸ್ಪತ್ರೆ ಅಧಿಕಾರಿಗಳು ಮತ್ತು ವೈದ್ಯರು ಪರಿಶೀಲಿಸಿ ಶೀಘ್ರ ಪ್ರಾರಂಭಿಸುವ ಭರವಸೆ ನೀಡಿದ್ದರು.

ಈಗಾಗಲೇ ಕೊರೊನಾ ಬಗ್ಗೆ ಜನ ಆತಂಕಗೊಂಡಿದ್ದಾರೆ. ಈ ಬಗ್ಗೆ ಸೂಕ್ತ ಜಾಗದಲ್ಲಿ, ಪ್ರತ್ಯೇಕ ವ್ಯವಸ್ಥೆ ಮಾಡಿ ನಿರಾತಂಕವಾಗಿ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ವೈದ್ಯಾಧಿಕಾರಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.