ತುಮಕೂರು: ತಾಲ್ಲೂಕಿನ ನಾಗವಲ್ಲಿಯ ರಖೀಬ್ ಅಹ್ಮದ್ ಖಾನ್ ಎಂಬುವರು ಆರ್ಟಿಒ ಚಲನ್ ಹೆಸರಿನ ಎಪಿಕೆ ಫೈಲ್ ಕ್ಲಿಕ್ ಮಾಡಿ ₹7.85 ಲಕ್ಷ ಕಳೆದುಕೊಂಡಿದ್ದಾರೆ.

ಜ. 23ರಂದು ಅಪರಿಚಿತ ಸಂಖ್ಯೆಯಿಂದ ಆರ್ಟಿಒ ಚಲನ್ ಲಿಂಕ್ ಇರುವ ಎಪಿಕೆ ಫೈಲ್ ಬಂದಿದೆ. ರಖೀಬ್ ಅದನ್ನು ಕ್ಲಿಕ್ ಮಾಡಿದ್ದಾರೆ. ಅದೇ ದಿನ ರಾತ್ರಿ ವಾಟ್ಸ್ ಆ್ಯಪ್ ಅಪ್ಡೇಟ್ ಕೇಳಿದ್ದು, ರಖೀಬ್ ಒಟಿಪಿ ಪಡೆದು ಅಪ್ಡೇಟ್ ಮಾಡಿದ್ದಾರೆ. 3–4 ಬಾರಿ ಒಟಿಪಿ ಬಂದಿದೆ. ಯಾರ ಜತೆಗೂ ಒಟಿಪಿ ಹಂಚಿಕೊಂಡಿಲ್ಲ. ಆದರೂ ಅವರ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆಯಾಗಿದೆ.

ಜ. 27ರಂದು ಅವರ ಖಾತೆಯಿಂದ ಹಂತ ಹಂತವಾಗಿ ₹7,85,025 ಕಡಿತವಾಗಿದೆ. ಎಪಿಕೆ ಫೈಲ್ ಕಳುಹಿಸಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಕಡಿತವಾದ ಹಣ ವಾಪಸ್ ಕೊಡಿಸಬೇಕು ಎಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.