ಚರ್ಚಾಸ್ಪರ್ಧೆಯಿಂದ ವ್ಯಕ್ತಿತ್ವ ವಿಕಸನ: ಪ್ರೊ.ಪಿ.ವಿ.ಕೃಷ್ಣಭಟ್

7
ವಿವಿಯಲ್ಲಿ ನಡೆದ ಸಹಕಾರ ಕುರಿತ ವಿವಿ ಮಟ್ಟದ ಚರ್ಚಾ ಸ್ಪರ್ಧೆ

ಚರ್ಚಾಸ್ಪರ್ಧೆಯಿಂದ ವ್ಯಕ್ತಿತ್ವ ವಿಕಸನ: ಪ್ರೊ.ಪಿ.ವಿ.ಕೃಷ್ಣಭಟ್

Published:
Updated:
Deccan Herald

ತುಮಕೂರು: ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಭಾಷಣಕಾರನು ಆಳ ಅಧ್ಯಯನ ನಡೆಸಿ ಜನರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿರಬೇಕು ಎಂದು ಒಡಿಶಾ ಕೇಂದ್ರಿಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ತಿಳಿಸಿದರು.

ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಏರ್ಪಡಿಸಿದ್ದ ಸಹಕಾರ ಕುರಿತ ವಿವಿ ಮಟ್ಟದ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಡವಾಳಶಾಹಿ ಮತ್ತು ಸಾಮ್ಯವಾದಿ ವ್ಯವಸ್ಥೆಗಳೆರಡರ ದೋಷಗಳನ್ನು ನಿವಾರಿಸಲು ಇರುವ ಏಕೈಕ ಮಾರ್ಗವೆಂದರೆ ಸಹಕಾರಿ ಕ್ಷೇತ್ರದಿಂದ ಸಾಧ್ಯ ಎಂದು ಹೇಳಿದರು.

ಸಹಕಾರ ಒಂದು ತತ್ವ. ಇದರ ಸೂತ್ರ ಪ್ರಾಚೀನ ಕಾಲದಲ್ಲೇ ಇದೆ. ಪರಸ್ಪರ ಸಹಕಾರದಿಂದಲೇ ದೇವತೆಗಳು ಅಮೃತ ಕುಡಿಯಲು ಸಮರ್ಥರಾದರು. ಹಾಗೆಯೇ ಸಮಾಜದಲ್ಲಿ ಪರಸ್ಪರ ಸಹಕಾರದಿಂದ ಇರಬೇಕೆಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ’ಪ್ರಧಾನಮಂತ್ರಿ ಅವರ ನೋಟಿನ ಅಮಾನ್ಯೀಕರಣಕ್ಕೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ನರೇಂದ್ರ ಮೋದಿಯವರು ಅಮಾನ್ಯೀಕರಣ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ಆಗಬಹುದಾದ ದೊಡ್ಡ ಮಟ್ಟದ ಬ್ಯಾಂಕ್‌ಗಳ ಕುಸಿತವನ್ನು ತಡೆದಿದ್ದಾರೆ’ ಎಂದರು.

ವಿವಿಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ’ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾನಿಲಯಗಳು ಪೂರಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ  ಪ್ರೊ.ಎಂ.ಕೊಟ್ರೇಶ್, ವಿವಿಯ ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ, ಕಲಾ ನಿಕಾಯದ ಡೀನ್ ಪ್ರೊ.ಎಲ್.ಪಿ.ರಾಜು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !