ತುಮಕೂರು: ನಗರದಲ್ಲಿ ನಮ್ಮ ಕ್ಲಿನಿಕ್ ನಾಮಕಾವಸ್ತೆ ಎಂಬಂತೆ ನಡೆಯುತ್ತಿದ್ದು, ವೈದ್ಯರ ನೇಮಕ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.

ನಮ್ಮ ಕ್ಲಿನಿಕ್ಗಳನ್ನು ಹೆಚ್ಚಾಗಿ ಶ್ರಮಿಕರ ಕಾಲೊನಿಗಳಲ್ಲಿ ಪ್ರಾರಂಭಿಸಲಾಗಿದೆ. ಹಲವು ಕಡೆಗಳಲ್ಲಿ ಕ್ಲಿನಿಕ್ಗಳು ಇದ್ದೂ ಇಲ್ಲದಂತಾಗಿವೆ. ಕನಿಷ್ಠ ನಾಮಫಲಕ ಅಳವಡಿಸಿಲ್ಲ, ವೈದ್ಯರ ನೇಮಕವಾಗಿಲ್ಲ. ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್ ಅಸಮಾಧಾನ ವ್ಯಕ್ತಪಡಿಸಿದರು.

ಅಗತ್ಯ ಸೌಕರ್ಯ ಇಲ್ಲದೆ ಜನರು ಖಾಸಗಿ ಕ್ಲಿನಿಕ್ಗಳತ್ತ ಮುಖ ಮಾಡುತ್ತಿದ್ದಾರೆ. ಕ್ಲಿನಿಕ್ಗೆ ಸರಿಯಾದ ಸೌಲಭ್ಯ ಕೊಡಿ, ಇಲ್ಲವೇ ಮುಚ್ಚಿ. ಈ ಸಮಸ್ಯೆ ಸರಿಪಡಿಸದಿದ್ದರೆ ಆರೋಗ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡ ಸೈಯದ್ ಅಲ್ತಾಫ್, ‘ಕ್ಲಿನಿಕ್ ಪ್ರಾರಂಭದಲ್ಲಿ ಸುಸಜ್ಜಿತವಾಗಿ ನಡೆಯಿತು. ಪ್ರಸ್ತುತ ಸ್ಥಿತಿ ಅಧೋಗತಿಗೆ ತಲುಪಿದೆ. ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ಸಣ್ಣ ಕಾಯಿಲೆಗೂ ದೊಡ್ಡಾಸ್ಪತ್ರೆಗೆ ಬರಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವೈದ್ಯರು, ಔಷಧಿ, ಪರಿಕರ ಇತರೆ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಂಕ್ರಯ್ಯ, ಕೃಷ್ಣಮೂರ್ತಿ, ಅಶ್ವತ್ಥ, ಎನ್.ಮಂಜುನಾಥ್, ಸುಲ್ತಾನ್, ಮುಷ್ತಾಕ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.