ವರದಕ್ಷಿಣೆ ಪಿಡುಗು ಹೋಗಲಾಡಿಸಿ

7

ವರದಕ್ಷಿಣೆ ಪಿಡುಗು ಹೋಗಲಾಡಿಸಿ

Published:
Updated:
Deccan Herald

ತುಮಕೂರು: ‘ಇಂದಿನ ಯುವಕರು ವರದಕ್ಷಿಣೆ ಪಿಡುಗು ನಿರ್ಮೂಲನೆಗೆ ಪಣ ತೊಡಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು’ ಎಂದು ಜಯನಗರ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾರ್ವತಮ್ಮ ಹೇಳಿದರು.

ನಗರದ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 'ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಅರಿವು' ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಚಿಕ್ಕ ಚಿಕ್ಕ ವಿಷಯಗಳಿಗೂ ಪೋಷಕರ ಮೇಲೆ ರೇಗಾಡುತ್ತಾರೆ. ಪ್ರೀತಿ ಪ್ರೇಮ ಎಂದು ಸುಮಾರು ಹೆಣ್ಣು ಮಕ್ಕಳು ಇಂದು ಮನೆ ಬಿಡುತ್ತಿದ್ದಾರೆ. ಇದನ್ನೇ ಕೆಲ ಅಪರಿಚಿತರು ಬಳಸಿಕೊಂಡು ವೇಶ್ಯಾವಾಟಿಕೆಗಳಿಗೆ ನೂಕುತ್ತಿದ್ದಾರೆ ಎಂದು ತಿಳಿಸಿದರು.

ಹದಿಹರಯದ ವಯಸ್ಸಿನಲ್ಲಿ ಅನೇಕ ಆಮಿಷ ಹಾಗೂ ದುಶ್ಚಟಗಳಿಗೆ ಒಳಗಾಗಿ ಏಕಾಗ್ರತೆಯನ್ನು ಕಳದೆದುಕೊಳ್ಳದೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಿರ್ಮಲಾ ಮಾತನಾಡಿ, ಯಾವುದೇ ದುಶ್ಚಟಗಳಿಗೆ ಒಳಗಾಗದೆ ಒಳ್ಳೆಯ ಪ್ರಜೆಯಾಗಿ ಬೆಳೆಯಿರಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ವಾಹನವನ್ನು ಚಲಾಯಿಸಬೇಕಾದರೆ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಕಡ್ಡಾಯವಾಗಿರಲಿ. ಏನಾದರೂ ಅನಾಹುತ ಆದರೆ ಅದಕ್ಕೆ ಪೋಷಕರೇ ಹೊಣೆಗಾರರಾಗಬೇಕಾಗುತ್ತದೆ ಎಂದರು.

ಪ್ರಾಂಶುಪಾಲ ಪ್ರೊ.ಕೆ.ಟಿ.ಮಂಜನಾಥ ಮಾತನಾಡಿ, ಮಹಿಳಾ ಪೊಲೀಸ್ ಠಾಣೆಯು ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಜಾಗೃತವಾಗಿದೆ ಎಂದು ಶ್ಲಾಘಿಸಿದರು.

ಶಿಕ್ಷಕರಾದ ಡಿ.ಟಿ.ರವಿನಂದನ, ಎನ್.ಟಿ.ಪ್ರಕಾಶ್, ಎಚ್.ಜಿ.ಹರೀಶ್ ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !