ಬುಧವಾರ, ಏಪ್ರಿಲ್ 14, 2021
24 °C

ಪರಿಸರ ರಕ್ಷಣೆ; ಸಿದ್ಧರಬೆಟ್ಟದಲ್ಲಿ ಸೀಡ್‌ಬಾಲ್ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ನಗರದ ಫಿಟ್ನೋಹಿಲಿಕ್ ಜಿಮ್‌ ಮುಖ್ಯಸ್ಥೆ ಶರ್ಮಿಳಾ ಅಮರ್‌ ತಿಳಿಸಿದರು. 

ಪರಿಸರ ರಕ್ಷಣೆ ಕುರಿತು ಜಿಮ್‌ನ 17 ಸದಸ್ಯರು ಸಿದ್ಧರಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಸೀಡ್‌ಬಾಲ್ ಅಭಿಯಾನದಲ್ಲಿ ಮಾತನಾಡಿದರು. ಬೇವಿನ ಸಸಿ ಮತ್ತು ಪಪ್ಪಾಯಿ ಸಸಿಗಳ 200ಕ್ಕೂ ಸೀಡ್‌ಬಾಲ್‌ಗಳ ಬೆಟ್ಟಕ್ಕೆ ಎಸೆಯಲಾಯಿತು.

ಸಸಿಗಳನ್ನು ನೆಡುವ ಮೂಲಕ ಆರೋಗ್ಯದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಪರಿಸರದ ಬಗ್ಗೆ ಹೆಚ್ಚು ಮೌಲ್ಯವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರಿಸರದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದರು. ಜಿಮ್‌ನ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.