ಶಿರಾ: ಹಣ ಪಡೆದು ನಕಲಿ ಇ-ಸ್ವತ್ತು ಮಾಡಿಕೊಟ್ಟಿದ್ದ ಆರೋಪದಲ್ಲಿ ನಗರಸಭೆ ಸಿಬ್ಬಂದಿ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ನ ಮಹಮದ್ ಶಾದಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಾಜಿ, ಅನಿಲ್ ಕುಮಾರ್ ಅವರನ್ನು ಕರ ವಸೂಲಿಗಾರ ಕೆಲಸಕ್ಕೆ ನಿಯೋಜಿಸಲಾಗಿದ್ದು, ನಕಲಿ ಇ– ಸ್ವತ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

ನಗರದ ನಿವಾಸಿಗಳಾದ ನಾಗರಾಜು, ಸುಮ, ಅಬ್ದುಲ್ ಖುರೇಶಿ ಅವರು ಇ-ಖಾತಾ ನವೀಕರಣಕ್ಕಾಗಿ ಶಿರಾ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಲಗತ್ತಿಸಿದ್ದ ಇ-ಖಾತೆ ಪ್ರತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಇ-ಆಸ್ತಿ, ತಂತ್ರಾಂಶದಲ್ಲಿ ದಾಖಲಾಗದೆ ಇರುವುದು ಕಂಡು ಬಂದ ಮೇರೆಗೆ ನಗರಸಭೆ ಕಂದಾಯ ಅಧಿಕಾರಿ ಎಚ್.ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು.

ನಗರಸಭೆ ನೌಕರರಾದ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ ಮಹಮದ್ ಶಾದಾಬ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಸ್ವತ್ತಿನ ಮಾಲೀಕರನ್ನು ಸಂಪರ್ಕಿಸಿ ಕಂದಾಯ ತೆರಿಗೆ ಪಾವತಿಸಬೇಕು ಎಂದು ಸ್ವತ್ತಿನ ಮಾಲೀಕರಿಗೆ ನಂಬಿಸಿ ತಲಾ ₹30 ಸಾವಿರ ಪಡೆದು ಬೇರೊಬ್ಬರ ಮೂಲ ಇ-ಸ್ವತ್ತಿನ ಪ್ರತಿಯಲ್ಲಿನ ಮಾಹಿತಿಯನ್ನು ಎಡಿಟ್ ಮಾಡಿ ನಕಲಿ ಇ-ಸ್ವತ್ತು ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿರುವುದು ತಿಳಿದು ಬಂದಿದೆ.

ಎಸ್.ಪಿ. ಅಶೋಕ್ ಕೆ.ವಿ, ಹೆಚ್ಚುವರಿ ಎಸ್.ಪಿ. ಗೋಪಾಲ್, ಪುರುಷೋತ್ತಮ್ ನಿರ್ದೇಶನದಲ್ಲಿ ಡಿವೈಎಸ್ ಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು. ಶಿರಾ ನಗರ ಠಾಣೆ ಸಿಪಿಐ ಮಂಜೇಗೌಡ, ಪಿಎಸ್ಐ ರೇಣುಕಾ ಯಾದವ್, ಎಎಸ್ಐ ಮಹಾಲಿಂಗಯ್ಯ ಹಾಗೂ ತನಿಖಾ ಸಹಾಯಕರಾಗಿ ರಂಗನಾಥಪ್ಪ ತಂಡದಲ್ಲಿ ಇದ್ದರು.

ಆರೋಪಿಗಳಿಂದ ಲ್ಯಾಪ್ಟಾಪ್, ಪ್ರಿಂಟರ್, ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.