ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪತರು ಟೈಲರ್‌ಗಳ ಸಂಘ ಅಸ್ತಿತ್ವಕ್ಕೆ

Last Updated 23 ಡಿಸೆಂಬರ್ 2020, 3:53 IST
ಅಕ್ಷರ ಗಾತ್ರ

ತಿಪಟೂರು: ಮನುಷ್ಯನಿಗೆ ಮಾನಸಿಕ ರೂಪದಷ್ಟೇ ದೈಹಿಕ ರೂಪವೂ ಮುಖ್ಯ. ಮಾನವನ ಬಾಹ್ಯ ಸೌಂದರ್ಯಕ್ಕೆ ರೂಪ ಕೊಡುವ ಶಕ್ತಿ ಟೈಲರ್‌ಗಳಿಗಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ನಗರದ ರೋಟರಿ ಭವನದಲ್ಲಿ ಕಲ್ಪತರು ಟೈಲರ್‌ಗಳ ಮತ್ತು ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿದರು.

ಜನರು ಹೊಸ ವಿನ್ಯಾಸದ ಉಡುಪು ಧರಿಸಿದರು ಕೂಡ ಹಳೆಯ ಕಾಲದ ಉಡುಪುಗಳಿಗೆ ಮಾರುಹೋಗುತ್ತಿದ್ದಾರೆ. ಬಟ್ಟೆ ಹೊಲಿಯುವ ವಿನ್ಯಾಸದಲ್ಲಿ ಹೊಸ ಹೊಸ ಅನ್ವೇಷಣೆ ಆಗುತ್ತಿವೆ. ಟೈಲರ್ ವೃತ್ತಿ ಮಾಡುವವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಬೇಕು. ವಿಶ್ವಾಸ, ನಂಬಿಕೆ ಹೆಚ್ಚು ಬೆಳೆಸಿಕೊಳ್ಳಿ ಎಂದು ಹೇಳಿದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಅಸಂಘಟಿತ ವರ್ಗ ಸಂಘಟಿತರಾದರೆ ಸವಲತ್ತು ಪಡೆಯಲು ಸಾಧ್ಯ. ಸಂಘಗಳ ಉದ್ದೇಶ, ಧ್ಯೇಯ ಒಂದೇ ಆಗಿರಬೇಕು. ಸಮುದಾಯದಿಂದ ಲಾಭ ಪಡೆಯಲು ಸಂಘಗಳು ಅವಶ್ಯಕ. ಸರ್ಕಾರ ಇತರೆ ವೃತ್ತಿ ಸಮುದಾಯಗಳಿಗೆ ನೀಡಿದಂತೆ ಟೈಲರ್‌ಗಳಿಗೂ ಆರ್ಥಿಕ ಸಹಾಯ ಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್, ಮುಖಂಡ ಬೆಳಗರಹಳ್ಳಿ ಸಿದ್ದರಾಮಣ್ಣ, ಆಲ್ ಇಂಡಿಯಾ ಟ್ರೇಡ್ ಕಾಂಗ್ರೆಸ್ ತಾಲ್ಲೂಕ ಅಧ್ಯಕ್ಷ ಗೋವಿಂದರಾಜು, ಸಂಘದ ಗೌರವಾಧ್ಯಕ್ಷ ಎಸ್.ಪರಮೇಶ್ ಆಚಾರ್, ಅಧ್ಯಕ್ಷ ಸದಾಶಿವಯ್ಯ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಸುಧಾಕರ್, ಖಜಾಂಚಿ ಹೊನ್ನಾ ಚಾರ್, ನಿರ್ದೇಶಕ ಚಂದ್ರಶೇಖರ್, ಗುರುಮೂರ್ತಿ, ಆನಂದಾಚಾರ್, ರಾಜೇಶ್, ಜಗದೀಶ್, ರಮೇಶ್, ಶಿವಯ್ಯ, ಕಮಲಬಾಯಿ, ರವೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT