ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸ್ಮೃತಿ: ಶಿಕ್ಷಕಿಯ ಇಚ್ಛಾಶಕ್ತಿ

Last Updated 2 ಅಕ್ಟೋಬರ್ 2019, 13:52 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ಸಾಮಾನ್ಯವಾಗಿ ಒಂದು ಕಾರ್ಯಕ್ರಮ ಎಂದರೆ ಕನಿಷ್ಠ 50- 100 ಜನರ ಪಾಲ್ಗೊಳ್ಳುವಿಕೆ ಇರಬೇಕು, ಆಗಲೇ ಅದಕ್ಕೊಂದು ಕಳೆ ಎಂದು ಭಾವಿಸುವವರೇ ಹೆಚ್ಚು. ಆದರೆ, ಇಲ್ಲಿನ ಶಾಲೆ ಇದಕ್ಕೊಂದು ಅಪವಾದ ಎಂದೇ ಹೇಳಬೇಕು.

ನಿಡಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಬ್ಬಳ್ಳಿ ಒಂದು ಪುಟ್ಟ ಗ್ರಾಮ. ಇರುವ 100 ಮನೆಗಳ ಬಹುತೇಕ ಮಕ್ಕಳು ಸಮೀಪದ ಇಲ್ಲವೇ ದೂರದಲ್ಲಿನ ಪಟ್ಟಣದ ಶಾಲೆಗಳಿಗೆ ದಾಖಲಾಗಿರುವವರೇ ಹೆಚ್ಚು. ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಕೇವಲ ಐದು.

ರಾಧಾ ಈ ಶಾಲೆಯ ಏಕೋಪಾದ್ಯಾಯಿನಿ. ಇರುವ ತಮ್ಮ ಬೆರಳೆಣಿಕೆಯಷ್ಟು ಮಕ್ಕಳನ್ನೇ ಮುಂದಿಟ್ಟುಕೊಂಡು ವರ್ಷಪೂರ್ತಿ ಇವರು ಆಚರಿಸುವ ಕಾರ್ಯಕ್ರಮಗಳು ಒಂದೆರಡಲ್ಲ.

ದೇಶದಾದ್ಯಂತ ಆಚರಿಸುತ್ತಿರುವ ಮಹಾತ್ಮ ಗಾಂಧಿಯವರ 150ನೇ ವರ್ಷಾಚರಣೆ ಸಂದರ್ಭದಲ್ಲಿ ಇವರು ತಮ್ಮ ಶಾಲೆಯಲ್ಲಿ ನಿರ್ವಹಿಸಿರುವ ಗಾಂಧೀ ಸ್ಮೃತಿ ಸಪ್ತಾಹವೇ ಅದಕ್ಕೊಂದು ಸಾಕ್ಷಿ.

ಸೆ. 23ರಂದು ಆರಂಭಿಸಿ ಗಾಂಧಿ ಜಯಂತಿ ದಿನಾಚರಣೆಯ ವರೆಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಆಚರಿಸಿದ್ದಾರೆ.

ಸೆ. 23, ಮಹಾತ್ಮಾ ಗಾಂಧಿಯವರ ಆದರ್ಶ ಗುಣಗಳು, ಮೌಲ್ಯಗಳ ಪರಿಚಯ, 24ರಂದು ಗಾಂಧೀ ಗೀತಗಾಯನ, ನೃತ್ಯ ರೂಪಕ, ಏಕಪಾತ್ರಾಭಿನಯ, 25ರಂದು ಗ್ರಾಮ ನೈರ್ಮಲ್ಯ, ಸ್ವಚ್ಛತೆ, ಶ್ರಮದಾನ, 26ರಂದು ಚರ್ಚಾ ಸ್ಪರ್ಧೆ, 27ರಂದು ಪ್ರಬಂಧ ಸ್ಪರ್ಧೆ, ಕವನ ವಾಚನ, 30ರಂದು ಗಾಂಧೀ ಭಾವಚಿತ್ರ ರಚನಾ ಸ್ಪರ್ಧೆ ಹಾಗೂ ಅ. 1ರಂದು ಮಹಾತ್ಮ ಗಾಂಧಿಯವರ ಬಾಲ್ಯ, ಜೀವನ ಕುರಿತಾದ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಚರಿಸಿರುವುದು ಅನುಕರಣೀಯ.

ಆ ಮೂಲಕ ಗ್ರಾಮದ ಮುಖಂಡರು, ಅಂಗನವಾಡಿ ಮಕ್ಕಳು ಶಿಕ್ಷಕರು, ಪೋಷಕರ ಸಹಭಾಗಿತ್ವದಲ್ಲಿ ಬುಧವಾರ ಆಚರಿಸಿದ ಗಾಂಧಿ ಜಯಂತಿಯನ್ನು ಅರ್ಥಪೂರ್ಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT