ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ₹5,000 ಪ್ರೋತ್ಸಾಹಧನ ನೀಡಿ

ರೈತ ಸಂಘ, ಹಸಿರು ಸೇನೆ, ರೈತ ಕೃಷಿ ಕಾರ್ಮಿಕ ಸಂಘಟನೆ ಒತ್ತಾಯ
Last Updated 25 ಜೂನ್ 2020, 6:06 IST
ಅಕ್ಷರ ಗಾತ್ರ

ತಿಪಟೂರು: ಕೊಬ್ಬರಿ ಬೆಳೆಗಾರರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕ್ವಿಂಟಲ್ ಕೊಬ್ಬರಿಯನ್ನು ₹10,300ಕ್ಕೆ ಖರೀದಿಸುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹ 5 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ರೈತ ಮುಖಂಡ ಶ್ರೀಕಾಂತ್ ಒತ್ತಾಯಿಸಿದರು.

ನಗರದ ಎಪಿಎಂಸಿ ರೈತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೊಬ್ಬರಿ ಬೆಲೆ ಬಾರಿ ಕುಸಿತ ಕಂಡ ನಾಲ್ಕು ತಿಂಗಳ ನಂತರ ನಾಫೆಡ್ ಮೂಲಕ ಮೂಲ ಬೆಲೆಗೆ ಖರೀದಿಸಿಲು ಮುಂದಾಗಿದೆ. ರಾಜ್ಯ ಸಕಾರವು ಇದಕ್ಕೆ ಪ್ರೋತ್ಸಾಹಧನ ನೀಡುವ ಭರವಸೆ ನೀಡಿದ್ದರೂ, ಖರೀದಿಸಿಲ್ಲ. ರೈತ ಪರ ಎಂದು ಹೇಳುವ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬಾರದಿರುವುದು ನೋವು ಉಂಟು ಮಾಡಿದೆ’ ಎಂದರು.

‘ಕಳೆದ ವಾರ ಗುಬ್ಬಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ₹1,300 ಬೆಂಬಲ ಬೆಲೆ ನೀಡುವ ಬಗ್ಗೆ ಪ್ರಾಸ್ತಾಪಿಸಿದ್ದರು. ಆದರೆ ನಂತರ ಜಿಲ್ಲಾಧಿಕಾರಿ ಸಭೆಯಲ್ಲಿ ನಾನು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ ಎನ್ನುತ್ತಾರೆ. ಜವಾಬ್ದಾರಿಯುತ ಸಚಿವರೇ ಈ ರೀತಿ ಮಾತನಾಡಿದರೆ ರೈತರ ಪರವಾಗಿ ಯಾರು ಸಹಕಾರ ನೀಡುತ್ತಾರೆ. ಕ್ವಿಂಟಲ್‌ ಕೊಬ್ಬರಿ ಉತ್ಪಾದನೆ ವೆಚ್ಚ ₹ 20 ಸಾವಿರದ ಅಸುಪಾಸಿನಲ್ಲಿದೆ’ ಎಂದು ಹೇಳಿದರು.

ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು, ‘ಕೊಬ್ಬರಿ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸದಿದ್ದರೆ ರಾಜ್ಯದಾದ್ಯಂತ ರೈತರು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿದರು. ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಆಲ್ಬೂರು ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT