ಮಂಗಳವಾರ, ಸೆಪ್ಟೆಂಬರ್ 17, 2019
24 °C

ಗುರುಕುಲ ಶಾಲೆ: ಪರಿವಾರ ಸಮೇತ ಗಣೇಶ ಪ್ರತಿಷ್ಠಾಪನೆ

Published:
Updated:
Prajavani

ತುಮಕೂರು: ಪ್ರತಿ ವರ್ಷದಂತೆ ನಗರದ  ಗುರುಕುಲ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶನಿವಾರ ಆಚರಿಸಲಾಯಿತು.

ಶಾಲೆಯು ಕಳೆದ 17 ವರ್ಷಗಳಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯ ವಿನ್ಯಾಸ ಹಾಗೂ ಶೈಲಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ.

ಈ ಬಾರಿ ’ಪರಿವಾರ ಸಮೇತ ಗಣೇಶ’ನನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಲಾಯಿತು.

ಯಾವುದೇ ರಾಸಾಯನಿಕ ಬಣ್ಣವನ್ನು ಬಳಸದೇ ಜೇಡಿ ಮಣ್ಣಿನಿಂದ ನಿರ್ಮಿಸಿದ್ದ ನಂದಿ ಮೇಲೆ ಶಿವಗೌರಿ ಯೊಂದಿಗೆ ಬಾಲಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಶ್ರೀಗುರು ಕುಲ ಶಾಲೆಯ ಮಕ್ಕಳು ಹಾಗೂ ಪೋಷಕರೊಂದಿಗೆ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಸಾಂಪ್ರಾದಾಯಿಕ ಉಡುಗೆಯಲ್ಲಿ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಡಗರದಿಂದ ಪಾಲ್ಗೊಂಡಿದ್ದರು.

ಶಿಕ್ಷಕಿ ಶೋಭಾ ಬಿಡಿಸಿದ ಬಣ್ಣದ ಚಿತ್ತಾರದ ರಂಗೋಲಿ ಎಲ್ಲರ ಮನಸೆಳೆಯಿತು. ಹಬ್ಬದ ಅಂಗವಾಗಿ ಶಾಲೆಯ ಸಿಬ್ಬಂದಿಗೆ ಆಡಳಿತ ಮಂಡಳಿವತಿಯಿಂದ ಬಾಗಿನ ನೀಡಲಾಯಿತು.

ಶಾಲೆಯ ಮುಖ್ಯಸ್ಥ ಟಿ.ಎಸ್. ಮಧುಜೈನ್,  ಪ್ರಾಂಶುಪಾಲರಾದ ಟಿ.ಎನ್. ರಶ್ಮಿ, ಸಿಬ್ಬಂದಿ ಮಂಜುಳ ಇದ್ದರು.

 

 

Post Comments (+)