ವಿಮೆ ಕಟ್ಟಲು ಅವಧಿ ವಿಸ್ತರಿಸುವಂತೆ ಮನವಿ

7

ವಿಮೆ ಕಟ್ಟಲು ಅವಧಿ ವಿಸ್ತರಿಸುವಂತೆ ಮನವಿ

Published:
Updated:

ತುಮಕೂರು: ಫಸಲ್ ಭೀಮಾ ಯೋಜನೆಯಡಿ ರೈತರು ವಿಮೆಯನ್ನು ಮಂಗಳವಾರ (ಕೊನೆ ದಿನ ಜುಲೈ 31) ಒಳಗಾಗಿ ವಿವಿಧ ಸಮಸ್ಯೆಗಳಿಂದ ಕಟ್ಟಲು ಆಗಿಲ್ಲದ ಕಾರಣ ಅವಧಿ ವಿಸ್ತರಣೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸ್ನೇಕ್ ನಂದೀಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

'ಸರ್ವರ್ ಬ್ಯೂಸಿ' ಹಾಗೂ ಬ್ಯಾಂಕ್ ಸಿಬ್ಬಂದಿ ತಾರಮತ್ಯದಿಂದ ರೈತರು ವಿಮೆ ಕಟ್ಟಲು ಆಗದೆ ವಾಪಸ್ಸಾಗಿದ್ದಾರೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಹಾಗಾಗಿ ರಾಜ್ಯ ಸರ್ಕಾರವು ಆಗಸ್ಟ್ ತಿಂಗಳ ಕೊನೆಯವರೆಗೆ ವಿಮೆ ಕಟ್ಟಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !