21ರಿಂದ ಕುಕ್ಕುವಾಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಭಾನುವಾರ, ಏಪ್ರಿಲ್ 21, 2019
26 °C

21ರಿಂದ ಕುಕ್ಕುವಾಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

Published:
Updated:

ತುಮಕೂರು: ಕ್ಯಾತ್ಸಂದ್ರ ಮೇದ ಜನಾಂಗದ ಚೌಡೇಶ್ವರಿ ಅಮ್ಮನವರ ಅಭಿವೃದ್ಧಿ ಹಾಗೂ ಸೇವಾ ಸಮಿತಿಯಿಂದ ಏ.21ರಿಂದ 25ರವರೆಗೆ  ಆದಿಶಕ್ತಿ ಕುಕ್ಕುವಾಡೇಶ್ವರಿ (ಚೌಡೇಶ್ವರಿ) ಅಮ್ಮನವರ ದೊಡ್ಡ ದೇವರ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.

ಬಸವೇಶ್ವರ ಬಡಾವಣೆಯ ಸಿದ್ಧಗಂಗಾ ಮಠದ ತಪ್ಪಲಿನಲ್ಲಿ ನೆಲೆಸಿರುವ ಅಮ್ಮನವರ ದೇವಸ್ಥಾನದಲ್ಲಿ ನಡೆಯಲಿದೆ. 21ರಂದು ಬೆಳಿಗ್ಗೆ 9ಕ್ಕೆ ಮೈಲಾರಲಿಂಗೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿಗೆ ಅಭಿಷೇಕ, ಸಂಜೆ 7ಕ್ಕೆ ಗೊರವರ ಕುಣಿತ, ದೋಣಿ ಪೂಜೆ, 22ರಂದು ಸಂಜೆ 6.30ಕ್ಕೆ ಪಂಚ ಅರ್ಚಕರಿಗೆ ಕಂಕಣ ಧಾರಣೆ, ವಿಶೇಷ ಪ್ರಥಮ ಪೂಜಾ ಹಾಗೂ ಮರಿ ಪೂಜಾ ಕಾರ್ಯಕ್ರಮ ಜರುಗಲಿದೆ.

23ರಂದು ಸಂಜೆ 5ಕ್ಕೆ ಅಮ್ಮನವರ ಉತ್ಸವ, ರಾತ್ರಿ 12 ಗಂಟೆಗೆ 101 ಮಹಾ ಮಂಗಳಾರತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

24ರಂದು ಬೆಳಿಗ್ಗೆ 10.30ಕ್ಕೆ ಶ್ರೀಕಲ್ಪ ಫೌಂಡೇಷನ್‌ನಿಂದ ಮೇದ ಜನಾಂಗದ ವಧು-ವರರ ಅನ್ವೇಷಣಾ ಕಾರ್ಯಕ್ರಮ, ಅಮ್ಮನ ಗುಡ್ಡದ ಅರ್ಚಕ ತಿಪ್ಪೇಸ್ವಾಮಿ ಅವರಿಗೆ ಸನ್ಮಾನ ನಡೆಯಲಿದೆ. 25ರಂದು ಸಂಜೆ 4.30ಕ್ಕೆ ಪುಣ್ಯಾಹ ನಂತರ ಪಾನಕ ಪರಿವಾರ ಹಾಗೂ ತೀರ್ಥ ಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಅಮ್ಮನವರ ಉತ್ಸವ ಜರುಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !