ಸುಳ್ಳುಗಾರ ಮೋದಿಯನ್ನು ನಂಬಬೇಡಿ

ಬುಧವಾರ, ಏಪ್ರಿಲ್ 24, 2019
31 °C
ಕೋಳಾಲದಲ್ಲಿ ನಡೆದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಡಾ.ಪರಮೇಶ್ವರ ಕರೆ

ಸುಳ್ಳುಗಾರ ಮೋದಿಯನ್ನು ನಂಬಬೇಡಿ

Published:
Updated:
Prajavani

ಕೊರಟಗೆರೆ: `ಮನ್ ಕಿ ಬಾತ್ ಎಂದು ದೇಶದ ಜನರಿಗೆ ಮಂಕು ಬೂದಿ ಎರಚುತ್ತಾ ವಿದೇಶಗಳನ್ನು ಸುತ್ತಿದೇ ಪ್ರಧಾನಿ ಮೋದಿ ಅವರ ದೊಡ್ಡ ಸಾಧನೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಲೇವಡಿ ಮಾಡಿದರು.

ತಾಲ್ಲೂಕಿನ ಕೋಳಾಲದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಗುಜರಾತಿನ ವ್ಯಕ್ತಿಗಳು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತ. ಅವರಿಗೆ ರೈತರ ಬಡವರ ಬಗ್ಗೆ ಕಾಳಜಿ ಇಲ್ಲ. ಮೋದಿ ತಮ್ಮ ಐದು ವರ್ಷ ಅಧಿಕಾರ ಅವಧಿಯಲ್ಲಿ 14 ಬಾರಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎಚ್ಚಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಒಂದೂ ಭರವಸೆಯನ್ನು ಬಿಜೆಪಿ ಕೇಂದ್ರ ಸರ್ಕಾರ ಈಡೇರಿಸಿಲ್ಲ’ ಎಂದು ಅರೋಪಿಸಿದರು.

ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಮಾತನಾಡಿ, ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.  ದೇವೇಗೌಡ ರೈತರ ಪರವಾಗಿದ್ದಾರೆ ಎನ್ನುವುದಕ್ಕೆ ಪಂಜಾಬಿನಲ್ಲಿ ಬೆಳೆದ ಹೊಸ ಭತ್ತದ ತಳಿಗೆ ದೇವೇಗೌಡ ರ ಹೆಸರು ಇಟ್ಟಿರುವುದೇ ಸಾಕ್ಷಿಯಾಗಿದೆ’ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಆರ್. ನಾರಾಯಣ್, ಜಿ.ಪಂ ಸದಸ್ಯರಾದ ಜಿ.ಆರ್.ಶಿವರಾಮಯ್ಯ ಮುಖಂಡ ವಾಲೆಚಂದ್ರಯ್ಯ, ಅರಕೆರೆ ಶಂಕರ್, ನಟ ಹನುಮಂತೇಗೌಡ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಜಿಲ್ಲಾ  ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಮಹಿಳಾ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಕಾರ್ಯದರ್ಶಿ ಕವಿತಾ, ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಜಿ.ಪಂ.ಸದಸ್ಯ ನಾರಾಯಣಮೂತರ್ಿ, ಮಾಜಿ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ಜ್ಯೋತಿ, ಸುಮಾ, ಮುಖಂಡರಾದ ಸೋಮಣ್ಣ, ತುಂಬಾಡಿ ರಾಮಚಂದ್ರಪ್ಪ, ಹುಲಿಕುಂಟೆ ಮಲ್ಲಿಕಾರ್ಜುನ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !