ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ರಾಯರ ಬೃಂದಾವನಕ್ಕೆ ಪೂಜೆ

Published 9 ಜುಲೈ 2024, 13:26 IST
Last Updated 9 ಜುಲೈ 2024, 13:26 IST
ಅಕ್ಷರ ಗಾತ್ರ

ಕುಣಿಗಲ್: ನಿಷ್ಕಲ್ಮಷ ಭಕ್ತಿಗೆ ಭಗವಂತ ಒಲಿದು ಸಾರ್ಥಕ ಜೀವನಕ್ಕೆ ಸಾಕ್ಷಿಯಾಗುವನು ಎಂದು ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಮದ್ದೂರು ರಸ್ತೆಯ ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ಬೃಂದಾವನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕಲಿಯುಗದ ಕಲ್ಪವೃಕ್ಷವಾಗಿರುವ ರಾಯರು ಸರ್ವಜನಾಂಗದ ಹಿತ ಬಯಸಿ ಭಕ್ತರ ರಕ್ಷಣೆ ಮಾಡಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಭಕ್ತರು ಶ್ರದ್ಧಾ– ಭಕ್ತಿ, ಸಮರ್ಪಣಾ ಭಾವದಿಂದ ಭಕ್ತಿ ಸಮರ್ಪಿಸಿದಾಗ ಮಾತ್ರವೇ ಒಳ್ಳೆಯ ಫಲ ಪಡೆಯಲು ಸಾಧ್ಯ ಎಂದರು.

ಮಠದ ವಿಚಾರಣ ಕರ್ತ ಬಿ.ಕೆ.ವೆಂಕಟಕೃಷ್ಣರಾವ್, ವ್ಯವಸ್ಥಾಪಕ ಅನಂತಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT