ಕುಣಿಗಲ್: ತಾಲ್ಲೂಕು ಆಸ್ಪತ್ರೆಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ವಶಕ್ಕೆ ಪಡೆದರು.
ಬುಧವಾರ ಸಂಜೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ಲೆಕ್ಕಪತ್ರಗಳ ದಾಖಲೆ ಪರಿಶೀಲಿಸಿದ್ದು, ಔಷಧ ಉಗ್ರಾಣ ಮತ್ತು ಸಂಗ್ರಹಾಲಯಗಳಿಗೆ ಬೀಗ ಹಾಕಿ ವಶಕ್ಕೆ ಪಡೆದಿದ್ದರು. ಗುರುವಾರ ಬೆಳಿಗ್ಗೆ ಪರಿಶೀಲನೆ ಮುಂದುವರೆಸಿದರು.
ಹಣಕಾಸು, ಆಯುಷ್ಮಾನ್ ಭಾರತ್ ಯೋಜನೆ, ಔಷಧಿ ಖರೀದಿ ಮತ್ತು ಉಪಯೋಗಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದು, ತಾಳೆಯಾಗದ ಕಾರಣ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿದರು.
ತಂಡದಲ್ಲಿ ಡಿವೈಎಸ್‌ಪಿ ಉಮಾಶಂಕರ್, ಇನ್‌ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ಸುರೇಶ, ಮಹಮ್ಮದ್ ಸಲೀಂ ಹಾಜರಿದ್ದರು.