ಶುಕ್ರವಾರ, ಆಗಸ್ಟ್ 7, 2020
28 °C

ಮಧುಗಿರಿ: ನಾಲ್ಕು ತಿಂಗಳ ಮಗುವಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ನಾಲ್ಕು ಮಂದಿಗೆ ಕೋವಿಡ್-19 ಧೃಡಪಟ್ಟಿದ್ದು, ಎಲ್ಲ ಸೋಂಕಿತರನ್ನು ಬುಧವಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ತಾಲ್ಲೂಕಿನ ಕಡಗತ್ತೂರು ಗ್ರಾಮಕ್ಕೆ ಸೌದಿ ಅರೇಬಿಯಾದಿಂದ ಬಂದಿದ್ದ 28 ವರ್ಷದ ವ್ಯಕ್ತಿ, ತಾಲ್ಲೂಕು ದೊಡ್ಡೇರಿ ಹೋಬಳಿಯ ಇಂದಿರಾ ಗ್ರಾಮಕ್ಕೆ ಬಂದಿದ್ದ 4 ವರ್ಷದ ಮಗುವಿಗೆ ಕೋವಿಡ್‌ – 19 ಇರುವುದು ದೃಢಪಟ್ಟಿದೆ.  

ಐ.ಡಿ.ಹಳ್ಳಿಯ ಗೂಲನಹಳ್ಳಿ ವ್ಯಕ್ತಿಗೆ ಈ ಹಿಂದೆ ಸೋಂಕು ಇರುವುದು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ 52 ವರ್ಷದ ವ್ಯಕ್ತಿಗೆ ಸೋಂಕು ಹಾಗೂ ಕಸಬಾ ವ್ಯಾಪ್ತಿಯ ಕೆರೆಗಳಪಾಳ್ಯ ಗ್ರಾಮದ 42 ವರ್ಷ ವ್ಯಕ್ತಿಗೆ ಸೋಂಕು ತಗುಲಿದೆ. ಅವರು ಮಧುಗಿರಿಯಲ್ಲಿ ಕ್ಷೌರದಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಹೇಗೆ ಸೋಂಕು ತಗುಲಿತು ಎಂಬ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಕಡಗತ್ತೂರು, ಇಂದಿರಾ ಗ್ರಾಮ ಹಾಗೂ ಗೂಲನಹಳ್ಳಿಯ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು