ಪಾಲಿಕೆ ನೂತನ ವ್ಯವಸ್ಥೆ; ತೆರಿಗೆ ಪಾವತಿಗೆ ನಗದು ರಹಿತ ವಹಿವಾಟು

7

ಪಾಲಿಕೆ ನೂತನ ವ್ಯವಸ್ಥೆ; ತೆರಿಗೆ ಪಾವತಿಗೆ ನಗದು ರಹಿತ ವಹಿವಾಟು

Published:
Updated:
Deccan Herald

ತುಮಕೂರು: ನಗರದ ನಾಗರಿಕರು ಮಹಾನಗರ ಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಮತ್ತು ಇತರೆ ಸೇವಾ ಶುಲ್ಕಗಳನ್ನು ತಾವಿರುವಲ್ಲಿಯೇ ವೀಕ್ಷಿಸಿ ನೇರವಾಗಿ ನಗದು ರಹಿತ ವಹಿವಾಟು (ಡಿಜಿಟಲ್ ಪೇಮೆಂಟ್) ಮೂಲಕ ಪಾವತಿಸಲು ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ತಿಳಿಸಿದ್ದಾರೆ.

ಡಿಜಿಟಲ್ ಪೇಮೆಂಟ್‌ ಮಾಡಲು ಹಲವಾರು ವಿಧಾನಗಳಿದ್ದು, ಮೊಬೈಲ್ ವಾಲೆಟ್ಸ್, ಪಾಲಿಕೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಪೇಮೆಂಟ್ ಮುಖಾಂತರ ಪಾವತಿಸಬಹುದು. ಅಲ್ಲದೇ ತುಮಕೂರು ಒನ್ ಕೇಂದ್ರಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳಿಂದ ಪಾವತಿಸಬಹುದಾಗಿದೆ ಎಂದು ಹೇಳಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಹಣಕಾಸು ವಹಿವಾಟು ನಡೆಸುವವರು ನಗದು ರಹಿತ ವಹಿವಾಟು ವಿಧಾನ ಅಳವಡಿಸಿಕೊಳ್ಳುವುದು ಬಹಳ ಪ್ರೇರಕವಾಗಿದೆ. ಮೊಬೈಲ್ ಫೋನ್, ಲ್ಯಾಪ್‌ಟಾಪ್‌ ನಲ್ಲಿ ಮನೆಯಿಂದಲೇ ನೇರವಾಗಿ ಮತ್ತು ಸರಳವಾಗಿ ಪಾವತಿ ಮಾಡಬಹುದು ಎಂದು ತಿಳಿಸಿದ್ದಾರೆ.

ನಗದುರಹಿತ ವ್ಯವಸ್ಥೆಯಡಿ ಮಾಡುವ ಎಲ್ಲ ಆರ್ಥಿಕ ವಹಿವಾಟುಗಳ ದಾಖಲೆಗಳಿದ್ದಲ್ಲಿ ಖರ್ಚುಗಳ ಬಗ್ಗೆ ಗಮನಹರಿಸಲು ಮತ್ತು ಉಳಿಸಲು ಸುಲಭವಾಗುತ್ತದೆ. ಈ ಸೇವೆಯನ್ನು ಬಳಸಿಕೊಳ್ಳಲು ಯಾವುದೇ ಸೇವಾ ಶುಲ್ಕಗಳು ಅನ್ವಯಿಸುವುದಿಲ್ಲ. ತುಮಕೂರು ಮಹಾನಗರ ಪಾಲಿಕೆಯಿಂದ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಪೇಟಿಎಮ್ ಸುರಕ್ಷಿತ ಮೊಬೈಲ್ ವ್ಯಾಲೆಟ್ಸ್ ಮುಖಾಂತರ ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ಶುಲ್ಕ ಪಾವತಿಸುವ ಸೌಲಭ್ಯ ಜಾರಿಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !