ಭಾನುವಾರ, ಅಕ್ಟೋಬರ್ 2, 2022
19 °C

ತುಮಕೂರು: ಅಪಘಾತದಲ್ಲಿ ಬೈಕ್ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಹೊರ ವಲಯದ ವರ್ತುಲ ರಸ್ತೆಯ ಶೆಟ್ಟಿಹಳ್ಳಿ ಸಿಗ್ನಲ್ ಬಳಿ ಗುರುವಾರ ಬೆಳಿಗ್ಗೆ ಟಿವಿಎಸ್ ಮೊಪೆಡ್‌ಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ನಗರದ ಗೂಳರವೆಯ ಮೂರ್ತಪ್ಪ (55) ಮೃತಪಟ್ಟವರು. ಶೆಟ್ಟಿಹಳ್ಳಿ ಎಚ್ಎಂಎಸ್ ಕಾಲೇಜು ಕಡೆಯಿಂದ ಮೊಪೆಡ್‌ನಲ್ಲಿ ಬಂದು ಸಿಗ್ನಲ್‌ನಲ್ಲಿ ಬಲ ಭಾಗಕ್ಕೆ ಚಲಿಸುತ್ತಿದ್ದಾಗ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೊಪೆಡ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.