ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬ್ಯಾಡಗಿ ಮೆಣಸಿನಕಾಯಿ ಮತ್ತಷ್ಟು ಖಾರ

ಕುಸಿದ ಟೊಮೆಟೊ ಧಾರಣೆ; ನಿಯಂತ್ರಣಕ್ಕೆ ಬಂದ ಹಣ್ಣಿನ ಬೆಲೆ
Last Updated 18 ಮಾರ್ಚ್ 2023, 14:29 IST
ಅಕ್ಷರ ಗಾತ್ರ

ತುಮಕೂರು: ಯುಗಾದಿ ಹಬ್ಬಕ್ಕೆ ಜನರು ತಯಾರಿ ನಡೆಸಿದ್ದು, ಹಣ್ಣಿನ ಬೆಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ತರಕಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಸೊಪ್ಪು ಚೇತರಿಸಿದ್ದು, ಟೊಮೆಟೊ ದರ ಪಾತಾಳ ಕಂಡಿದೆ. ಕೋಳಿ ಮಾಂಸದ ಬೆಲೆ ಸ್ವಲ್ಪ ಏರಿಕೆಯಾಗಿದ್ದರೆ, ಮೀನು ದರ ಇಳಿಕೆಯಾಗಿದೆ.

ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಮಾರುಕಟ್ಟೆಗೆ ಬರುವ ತರಕಾರಿ ಆವಕದಲ್ಲೂ ಏರಿಕೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಟೊಮೆಟೊ ಆವಕ ಹೆಚ್ಚಾಗಿದ್ದು, ಬೆಲೆ ತೀವ್ರ ಕುಸಿತ ಕಂಡಿದೆ. ಕೆ.ಜಿ ₹5–10ಕ್ಕೆ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲವಾಗಿದ್ದಾರೆ. ಸಾಗಣೆ ವೆಚ್ಚವೂ ಸಿಗದೆ ರೈತರು ಕಂಗಾಲಾಗಿದ್ದಾರೆ.

ಬೀನ್ಸ್, ಬದನೆಕಾಯಿ, ಎಲೆಕೋಸು, ಹೂ ಕೋಸು, ತೊಂಡೆಕಾಯಿ ಧಾರಣೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹಸಿರು ಮೆಣಸಿನ ಕಾಯಿ, ಕ್ಯಾಪ್ಸಿಕಂ ದುಬಾರಿಯಾಗಿದ್ದು, ಕೆ.ಜಿಗೆ ₹50–60ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹80–100ಕ್ಕೆ ಮಾರಾಟ ಮಾಡಲಾಗುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಬಹುತೇಕ ಎರಡು ಪಟ್ಟು ಹೆಚ್ಚಳವಾದಂತಾಗಿದೆ. ಬೇಸಿಗೆಯಲ್ಲಿ ದಾಹ ತಣಿಸಲು ಬಳಸುವ ನಿಂಬೆ ಹಣ್ಣು ಬೆಲೆ ಮತ್ತಷ್ಟು ಏರಿಕೆಯಾಗಿದೆ. ಸೌತೆಕಾಯಿ ದರ ಅಲ್ಪಮಟ್ಟಿಗೆ ಕಡಿಮೆಯಾಗಿದೆ.

ಸೊಪ್ಪು ಚೇತರಿಕೆ: ಹಿಂದಿನ ವಾರದಿಂದ ಏರಿಕೆಯತ್ತ ಹೆಜ್ಜೆ ಹಾಕಿರುವ ಸೊಪ್ಪಿನ ಬೆಲೆ ಈ ವಾರವೂ ಸ್ವಲ್ಪ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿಗೆ ₹30–40, ಸಬ್ಬಕ್ಕಿ ಕೆ.ಜಿಗೆ ₹25–30, ಮೆಂತ್ಯ ಸೊಪ್ಪು ಕೆ.ಜಿಗೆ ₹25–30, ಪಾಲಕ್ ಸೊಪ್ಪು (ಕಟ್ಟು) ₹20ಕ್ಕೆ ಮಾರಾಟವಾಗುತ್ತಿದೆ. ಯುಗಾದಿ ಹಬ್ಬ ಹಾಗೂ ಮರುದಿನದ ವರ್ಷ ತೊಡಕಿನ ಹೊತ್ತಿಗೆ ಕೊತ್ತಂಬರಿ ಸೊಪ್ಪು ಮತ್ತಷ್ಟು ಏರಿಕೆಯಾಗಬಹುದು ಎಂದು ಅಂತರಸನಹಳ್ಳಿ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಹಣ್ಣು ದರ ನಿಯಂತ್ರಣ: ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವ ಹಣ್ಣಿನ ಬೆಲೆ ಈ ವಾರ ಏರಿಕೆ ದಾಖಲಿಸದಿದ್ದರೂ, ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ದಾಳಿಂಬೆ, ಕಿತ್ತಳೆ, ಏಲಕ್ಕಿ ಬಾಳೆ, ಕರಬೂಜ, ಕಲ್ಲಂಗಡಿ ಹಣ್ಣಿನ ದರ ಕೊಂಚ ಕಡಿಮೆಯಾಗಿದೆ. ಆದರೆ, ಪೈನಾಪಲ್ ಧಾರಣೆ ಮತ್ತಷ್ಟು ಹೆಚ್ಚಳವಾಗಿದೆ.

ಬೇಳೆ ಯಥಾಸ್ಥಿತಿ: ಏರಿಕೆಯತ್ತ ಮುಖ ಮಾಡಿದ್ದ ತೊಗರಿ ಬೇಳೆ ಧಾರಣೆ ಈ ವಾರ ಯಥಾಸ್ಥಿತಿ ಮುಂದುವರಿದಿದೆ. ದುಬಾರಿಯಾಗಿದ್ದ ಗೋಧಿ ದರ ಕಡಿಮೆಯಾಗಿದ್ದು, ಕೆ.ಜಿಗೆ ₹4–5 ಇಳಿಕೆಯಾಗಿದೆ. ಗಗನ ಮುಟ್ಟಿದ್ದ ಕಡಲೆಕಾಯಿ ಬೀಜ ಎರಡು ವಾರದಿಂದ ಇಳಿಕೆಯತ್ತ ಸಾಗಿದ್ದು, ಈ ವಾರವೂ ಅಲ್ಪ ಕುಸಿದಿದೆ.

ಇಳಿದ ಅಡುಗೆ ಎಣ್ಣೆ: ಯುಗಾದಿ ಹಬ್ಬದ ವೇಳೆಗೆ ಎಣ್ಣೆ ಧಾರಣೆ ದುಬಾರಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಏರಿಕೆ ಬದಲು ಅಲ್ಪ ಇಳಿಕೆಯಾಗಿದೆ. ಸನ್‌ ಫ್ಲವರ್ ಕೆ.ಜಿಗೆ ₹125–130, ಪಾಮಾಯಿಲ್ ಕೆ.ಜಿಗೆ ₹97–98, ಕಡಲೆಕಾಯಿ ಎಣ್ಣೆ ಕೆ.ಜಿಗೆ ₹155–160ಕ್ಕೆ ಮಾರಾಟವಾಗುತ್ತಿದೆ.

ಮಸಾಲೆ ಪದಾರ್ಥ ದುಬಾರಿ: ಹಬ್ಬ, ಜಾತ್ರೆ ಚಟುವಟಿಕೆಗಳು ನಡೆಯುತ್ತಿದ್ದು, ಈ ಸಮಯದಲ್ಲಿ ಬಾಡೂಟಕ್ಕೆ ಹೆಚ್ಚಾಗಿ ಬಳಸುವ ಮಸಾಲೆ ಪದಾರ್ಥಗಳ ದರ ಏರಿಕೆಯಾಗಿದೆ. ಬ್ಯಾಡಗಿ ಮೆಣಸಿನಕಾಯಿ ಬೆಲೆ ಒಮ್ಮೆಲೆ ಕೆ.ಜಿಗೆ ₹150, ಲವಂಗ ಕೆ.ಜಿಗೆ ₹60–70 ಹೆಚ್ಚಳವಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿಗೆ ₹550–600, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿಗೆ ₹250–260, ಕರಿಮೆಣಸು ಕೆ.ಜಿಗೆ ₹550–580, ಜೀರಿಗೆ ಕೆ.ಜಿಗೆ ₹350–380, ಸಾಸಿವೆ ಕೆ.ಜಿಗೆ ₹75–80, ಮೆಂತ್ಯ ಕೆ.ಜಿಗೆ ₹90–95, ಚಕ್ಕೆ ಕೆ.ಜಿಗೆ ₹260–300, ಲವಂಗ ಕೆ.ಜಿಗೆ ₹800–850, ಗುಣಮಟ್ಟದ ಗಸಗಸೆ ಕೆ.ಜಿಗೆ ₹1,350–1,400, ಬಾದಾಮಿ ಕೆ.ಜಿಗೆ ₹650–670, ಗೋಡಂಬಿ ಕೆ.ಜಿ ₹680–750, ದ್ರಾಕ್ಷಿ ಕೆ.ಜಿಗೆ ₹220–240, ಹುಣಸೆಹಣ್ಣು ₹100–140ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮತ್ತೆ ಏರಿಕೆ: ಹಿಂದಿನ ವಾರದಿಂದ ಏರಿಕೆಯತ್ತ ಮುಖ ಮಾಡಿರುವ ಕೋಳಿ ಮಾಂಸದ ಬೆಲೆ ಈ ವಾರವೂ ದುಬಾರಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿಗೆ ₹110, ರೆಡಿ ಚಿಕನ್ ಕೆ.ಜಿಗೆ ₹180, ಸ್ಕಿನ್‌ಲೆಸ್ ಕೆ.ಜಿಗೆ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿಗೆ ₹100ಕ್ಕೆ ಮಾರಾಟವಾಗುತ್ತಿದೆ. ಯುಗಾದಿ ಹಬ್ಬದ ವೇಳೆಗೆ ಇನ್ನಷ್ಟು ಬೆಲೆ ಏರಿಕೆಯಾಗಲಿದೆ.

ಮೀನು ಇಳಿಕೆ: ಕೆಲ ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಮೀನಿನ ಬೆಲೆ ಈಗ ಇಳಿಕೆಯತ್ತ ಮುಖ ಮಾಡಿದೆ. ಸೀಗಡಿ ಹೊರತುಪಡಿಸಿದರೆ ಇತರೆ ಎಲ್ಲಾ ಮೀನುಗಳ ದರ ಕಡಿಮೆಯಾಗಿದೆ. ಬಂಗುಡೆ ಕೆ.ಜಿಗೆ ₹210, ಬೂತಾಯಿ ಕೆ.ಜಿಗೆ ₹130, ಅಂಜಲ್ ಕೆ.ಜಿಗೆ ₹990, ಬೊಳಿಂಜರ್ ಕೆ.ಜಿಗೆ ₹210, ಬಿಳಿ ಮಾಂಜಿ ಕೆ.ಜಿಗೆ ₹1,150, ಕಪ್ಪುಮಾಂಜಿ ಕೆ.ಜಿಗೆ ₹710, ಸೀಗಡಿ ಕೆ.ಜಿಗೆ ₹550, ಏಡಿ ₹340ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
**
ಹಣ್ಣು (ಬೆಲೆ ಕೆ.ಜಿ ₹)

ಸೇಬು;190–200

ದಾಳಿಂಬೆ;220

ಮೂಸಂಬಿ;100

ಕಿತ್ತಳೆ;70

ಸಪೋಟ;80

ಏಲಕ್ಕಿ ಬಾಳೆ;75

ಪಚ್ಚಬಾಳೆ;40

ಪಪ್ಪಾಯ;40

ಸೀಬೆ;100

ಪೈನಾಪಲ್;90

ಕರಬೂಜ;40

ಕಲ್ಲಂಗಡಿ;25

ದ್ರಾಕ್ಷಿ;60–80

***

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;105–125

ಉದ್ದಿನ ಬೇಳೆ;110–120

ಹೆಸರು ಬೇಳೆ;105–110

ಕಡಲೆ ಬೇಳೆ;65–70

ಹೆಸರು ಕಾಳು;100–105

ಕಡಲೆಕಾಳು;58–65

ಅಲಸಂದೆ;80–85

ಅವರೆಕಾಳು;120–130

ಹುರುಳಿಕಾಳು;70–75

ಹುರಿಗಡಲೆ;75–80

ಬಟಾಣಿ;55–65

ಕಡಲೆ ಬೀಜ;120–125

ಗೋಧಿ;36–40

ಸಕ್ಕರೆ;36–37

***

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;35–40

ಕ್ಯಾರೆಟ್;15–20

ಬೀಟ್ರೂಟ್‌;15–20

ಈರುಳ್ಳಿ;15–20

ಟೊಮೆಟೊ;10

ಆಲೂಗಡ್ಡೆ;20–25

ಗೆಡ್ಡೆಕೋಸು;15–20

ಮೂಲಂಗಿ;15–20

ಬೆಂಡೆಕಾಯಿ;35–40

ಬದನೆಕಾಯಿ;25–30

ಎಲೆಕೋಸು;15–20

ಹೂಕೋಸು(1ಕ್ಕೆ);30

ತೊಂಡೆಕಾಯಿ;30–40

ಹಾಗಲಕಾಯಿ;25–30

ನುಗ್ಗೆಕಾಯಿ;50–60

ಮೆಣಸಿನಕಾಯಿ;50–60

ಕ್ಯಾಪ್ಸಿಕಂ;50–60

ಶುಂಠಿ;30–70

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;5–6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT